alex Certify ದುಬಾರಿ ಮೊಬೈಲ್‌ ಹೊಂದಿದ್ದರೂ ಟಿಕೆಟ್‌ ಗೆ ಹಣವಿಲ್ಲವೆಂದ ಸಾಧುಗಳು ; ದಂಡ ವಿಧಿಸಿದ ರೈಲ್ವೇ ಅಧಿಕಾರಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಮೊಬೈಲ್‌ ಹೊಂದಿದ್ದರೂ ಟಿಕೆಟ್‌ ಗೆ ಹಣವಿಲ್ಲವೆಂದ ಸಾಧುಗಳು ; ದಂಡ ವಿಧಿಸಿದ ರೈಲ್ವೇ ಅಧಿಕಾರಿ !

ಉತ್ತರ ಪ್ರದೇಶದ ಝಾನ್ಸಿ ವಿಭಾಗದ ದಬ್ರಾ ನಿಲ್ದಾಣದ ಮೂಲಕ ಹಾದುಹೋಗುವ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಇಬ್ಬರು ಸಾಧುಗಳು ಸಿಕ್ಕಿಬಿದ್ದಿದ್ದಾರೆ. ಟಿಕೆಟ್ ತಪಾಸಕರು ಅವರನ್ನು ವಿಚಾರಿಸಿದಾಗ, ತಮ್ಮ ಬಳಿ ಹಣವಿಲ್ಲ ಎಂದು ಅವರು ಹೇಳಿದ್ದು, ಆದಾಗ್ಯೂ, ಅವರು ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಹಿಡಿದಿರುವುದನ್ನು ಕಂಡು ಅಧಿಕಾರಿಗಳು ಆಶ್ಚರ್ಯಚಕಿತರಾದರು. ತಮ್ಮ ಕ್ರಮಗಳನ್ನು ಸಮರ್ಥಿಸಲು ವಿಫಲವಾದ ನಂತರ, ಸಾಧುಗಳು ದಂಡವನ್ನು ಪಾವತಿಸಿದ್ದಾರೆ.

ಧ್ಯಾನದ ಮಾಲೆ ಹೊಂದಿರುವ ಕೇಸರಿ ನಿಲುವಂಗಿ ಧರಿಸಿದ್ದ ಸಾಧುಗಳು, “ನಾವು ಸಾಧುಗಳು. ಟಿಕೆಟ್‌ಗಳಿಗೆ ಹಣ ಎಲ್ಲಿಂದ ತರೋದು ?” ಎಂದು ಉತ್ತರಿಸಿದ್ದಾರೆ. ಆದರೆ, ದುಬಾರಿ ಮೊಬೈಲ್ ಫೋನ್ ಖರೀದಿಸಲು ಶಕ್ತರಾಗಿರುವಾಗ ಟಿಕೆಟ್‌ಗಳಿಗೆ ಹಣವಿಲ್ಲವೇ ಎಂದು ಟಿಕೆಟ್ ತಪಾಸಕರು ವಾಪಾಸ್ ಪ್ರಶ್ನಿಸಿದ್ದಾರೆ.

ಸಾಧುಗಳು ಆರಂಭದಲ್ಲಿ ವಿವಿಧ ನೆಪಗಳೊಂದಿಗೆ ವಿಷಯವನ್ನು ತಿರುಗಿಸಲು ಪ್ರಯತ್ನಿಸಿದರೂ, ಅಂತಿಮವಾಗಿ ದಂಡವನ್ನು ಪಾವತಿಸಿದ್ದಾರೆ. ಈ ಘಟನೆಯ ನಂತರ, ಟಿಕೆಟ್ ಇಲ್ಲದೆ ಪ್ರಯಾಣಿಸುವುದು, ಬುಕ್ ಮಾಡದ ಲಗೇಜ್ ಕೊಂಡೊಯ್ಯುವುದು ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಕಸ ಹಾಕಿದ್ದಕ್ಕಾಗಿ ಹಲವಾರು ಪ್ರಯಾಣಿಕರಿಗೆ ದಂಡ ವಿಧಿಸಲಾಯಿತು. ಒಟ್ಟಾರೆಯಾಗಿ, 155 ಪ್ರಯಾಣಿಕರಿಗೆ ತಲಾ 74 ರೂ. ದಂಡ ವಿಧಿಸಲಾಗಿದೆ.

ಭಾರತೀಯ ರೈಲ್ವೆ ಟಿಕೆಟ್ ರಹಿತ ಪ್ರಯಾಣವನ್ನು ತಡೆಯಲು ನಿರಂತರ ತಪಾಸಣೆ ನಡೆಸುತ್ತದೆ. ಝಾನ್ಸಿ ವಿಭಾಗದ ದಬ್ರಾ ನಿಲ್ದಾಣದಲ್ಲಿ ಆಗಾಗ್ಗೆ ತಪಾಸಣೆ ನಡೆಯುತ್ತದೆ. ಕಾಯ್ದಿರಿಸಿದ ಟಿಕೆಟ್ ಹೊಂದಿರುವವರ ಅನುಕೂಲವನ್ನು ಖಚಿತಪಡಿಸಿಕೊಳ್ಳಲು ಮತ್ತು ರೈಲ್ವೆ ಆದಾಯವನ್ನು ಹೆಚ್ಚಿಸಲು ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...