
ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕವನ್ನು ನಾನೇ ಇಟ್ಟಿರುವುದಾಗಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಹೇಳಿದ್ದಾರೆ.
ಅಂಬಾನಿ ನಿವಾಸ ಅಂಟಿಲಿಯಾ ಬಳಿ ಸ್ಪೋಟಕ ಇಟ್ಟಿದ್ದ ಕಾರ್ ಕಂಡು ಬಂದಿದ್ದು, ತನಿಖೆ ಕೈಗೊಂಡಿದ್ದ ಎನ್ಐಎ ಸಚಿನ್ ವಾಝೆ ಅವರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈ ಪ್ರಕರಣವನ್ನು ಬಗೆಹರಿಸಿ ಸೂಪರ್ ಕಾಪ್ ಆಗಬೇಕೆಂದುಕೊಂಡು ತಾನೇ ಸ್ಪೋಟಕ ಇಟ್ಟಿದ್ದಾಗಿ ಸಚಿನ್ ವಾಝೆ ಎನ್ಐಎ ಎದುರು ತಪ್ಪೊಪ್ಪಿಕೊಂಡಿದ್ದಾರೆನ್ನಲಾಗಿದೆ. ಈ ಪ್ರಕರಣ ಭಾರೀ ತಿರುವು ಪಡೆದು ರಾಜಕೀಯವಾಗಿಯೂ ಬಿರುಗಾಳಿ ಎಬ್ಬಿಸಿದೆ.