
“ಅವರು ನಮಗೆ ಬರೀ ಕ್ರಿಕೆಟ್ ಅಷ್ಟನ್ನೇ ಹೇಳಿಕೊಟ್ಟಿಲ್ಲ, ಆದರೆ ನಾವು ಪ್ರಾಮಾಣಿಕತೆಯಿಂದ ಆಡಿದರೆ ಒಂದು ದಿನ ಭಾರತಕ್ಕೆ ಆಡುತ್ತೇವೆ ಎಂಬ ನಂಬಿಕೆಯನ್ನೂ ತುಂಬಿದ್ದರು. ಇಂಥ ಉಡುಗೊರೆ ಕೊಟ್ಟ ವ್ಯಕ್ತಿಯೊಬ್ಬರಿಗೆ ನೀವು ಎಷ್ಟೇ ಧನ್ಯವಾದ ಹೇಳಿದರೂ ಸಾಲದು. ನೀವು ನಮ್ಮೊಂದಿಗೆ ಇರಬೇಕಿತ್ತು, ಅಚ್ರೇಕರ್ ಸರ್. ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ,” ಎಂದು ಸಚಿನ್ ಟ್ವಿಟರ್‌ನಲ್ಲಿ ತಮ್ಮ ಗುರುಗಳಿಗೆ ನುಡಿನಮನ ಸಲ್ಲಿಸಿದ್ದಾರೆ.
ತಮ್ಮ ಬಾಲ್ಯದ ದಿನದಲ್ಲಿ, ನೆಟ್ ಪ್ರಾಕ್ಟೀಸ್ ಒಂದರ ವೇಳೆ ಅಚ್ರೇಕರ್ ಅವರು ಬ್ಯಾಟಿಂಗ್ ಶೈಲಿಯನ್ನು ತಿದ್ದುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿರುವ ಸಚಿನ್, ತಮ್ಮ ಮೆಚ್ಚಿನ ಗುರುವಿಗೆ ಸಂದೇಶದ ಮೂಲಕ ನಮನ ಸಲ್ಲಿಸಿದ್ದಾರೆ.
1990ರಲ್ಲಿ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದ ಅಚ್ರೇಕರ್‌ಗೆ 2010ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಸನ್ಮಾನಿಸಲಾಗಿದೆ.