ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಆಗಿ ಇದ್ದಾರೆ. ಸದಾ ಒಂದಿಲ್ಲೊಂದು ಸ್ಫೂರ್ತಿದಾಯಕ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಒಬ್ಬ ವ್ಯಕ್ತಿಯ ಫೋಟೋವನ್ನು ಪೋಸ್ಟ್ ಮಾಡುವ ಮುಖಾಂತರ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ.
ದಿವ್ಯಾಂಗ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಡನೆ ಕೇರಮ್ ಆಡುತ್ತಿರುವುದನ್ನು ಸಚಿನ್ ಪರಿಚಯಿಸಿದ್ದಾರೆ. ತನಗೆ ಕೈಗಳಿಲ್ಲದಿದ್ದರೂ ಕಾಲಿನ ಸಹಾಯದಿಂದ ಕೇರಮ್ ಆಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್ ನಲ್ಲಿ, ‘’ಇಲ್ಲಿ ನೋಡಿ ಹರ್ಷದ್ ಗೋಥಂಕರ್ ಅವರು ಇದು ನನ್ನಿಂದ ಸಾಧ್ಯ ಅನ್ನೋ ಧ್ಯೇಯ ವಾಕ್ಯವನ್ನು ತೋರಿಸಿಕೊಟ್ಟಿದ್ದಾರೆʼʼ ಅಂತಾ ಸಚಿನ್ ಬರೆದಿದ್ದಾರೆ. ಅಲ್ಲದೆ ʼʼಅಸಾಧ್ಯ ಮತ್ತು ಸಂಭವನೀಯ ನಡುವಿನ ವ್ಯತ್ಯಾಸವು ಒಬ್ಬರ ದೃಷ್ಠಿಕೋನದಲ್ಲಿರುತ್ತದೆ’’ ಎಂದು ಕೂಡ ಹೇಳಿದ್ದಾರೆ.
ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಕಳ್ಳನನ್ನು ಹಿಡಿಯಲು ಓಡಿದ ಆಟಗಾರರು…!
ಹರ್ಷದ್ ಗೋಥಂಕರ್ ಅವರನ್ನು ಶ್ಲಾಘಿಸುತ್ತಾ, “ವಿಷಯಗಳನ್ನು ಸಾಧ್ಯವಾಗಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಅವರ ಪ್ರೇರಣೆಯನ್ನು ಪ್ರೀತಿಸಿ, ನಾವೆಲ್ಲರೂ ಅವರಿಂದ ಕಲಿಯಬಹುದು’’ ಎಂದು ಸಚಿನ್ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.