ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಮಹಾರಾಷ್ಟ್ರದ ರುಚಿಯಾದ/ ಪ್ರಸಿದ್ಧವಾದ ತಿಂಡಿಯನ್ನು ಸವಿದಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಚಿನ್ ಮಿಸಾಲ್ ಪಾವ್ ಅನ್ನು ತಿನ್ನುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮಹಾರಾಷ್ಟ್ರದ ಸವಿಯಾದ ರುಚಿಯನ್ನು ನಿಜವಾಗಿಯೂ ಇಷ್ಟಪಟ್ಟಿದ್ದಾರೆ ಅನ್ನೋದಕ್ಕೆ ಈ ವೈರಲ್ ವಿಡಿಯೋ ಪುರಾವೆಯಾಗಿದೆ. 25 ಸೆಕೆಂಡುಗಳ ವಿಡಿಯೋವನ್ನು ಟ್ವಿಟರ್‌ನಲ್ಲಿ 379.6 ಕೆ ವೀಕ್ಷಣೆಗಳನ್ನು ಗಳಿಸಿದ್ದರೆ, ಇನ್ಸ್ಟಾಗ್ರಾಂನಲ್ಲಿ 5.5 ಮಿಲಿಯನ್ ವೀಕ್ಷಣೆ ಗಳಿಸಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಸಚಿನ್ ತೆಂಡೂಲ್ಕರ್ ಅವರು ಮಿಸಲ್ ಪ್ಲೇಟ್‌ನ ಮೇಲೆ ನಿಂಬೆ ರಸವನ್ನು ಹಿಂಡಿದ್ದಾರೆ. ನಂತರ ಅವರು ಬ್ರೆಡ್ ತುಂಡು (ಪಾವ್) ನೊಂದಿಗೆ ಸವಿದಿದ್ದಾರೆ. ಅವರು ತಮ್ಮ ನೆಚ್ಚಿನ ಮಹಾರಾಷ್ಟ್ರದ ಬಹಳ ರುಚಿಕರವಾದ ಭಕ್ಷ್ಯವನ್ನು ಸೇವಿಸುವಾಗ ಎಷ್ಟು ಚೆನ್ನಾಗಿದೆ ಎಂದು ರುಚಿಯನ್ನು ವಿವರಿಸಿದ್ದಾರೆ. ಅಲ್ಲದೆ ಈ ಖಾದ್ಯವು ತನಗೆ ಬರ್ಮೀಸ್ ಖಾವೊ ಸೂಯಿಯನ್ನು ನೆನಪಿಸುತ್ತದೆ ಎಂದು ಅವರು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಸಚಿನ್ ಭಾನುವಾರ ಮಿಸಾಲ್ ಪಾವ್ ಖಾದ್ಯವನ್ನು ಸೇವಿಸಿದ್ದಾರೆ. ಭಾನುವಾರ ಅಥವಾ ಸೋಮವಾರವೇ ಆಗಿರಲಿ, ತಾನು ಯಾವುದೇ ದಿನ ಮಿಸಾಲ್ ಪಾವ್ ತೆಗೆದುಕೊಳ್ಳುತ್ತೇನೆ! ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರದ ರುಚಿಯಾದ ಖಾದ್ಯ ಮಿಸಾಲ್ ಪಾವ್ ಬಗ್ಗೆ ಸಚಿನ್ ತೆಂಡೂಲ್ಕರ್ ಹೇಳಿದ್ದಕ್ಕೆ ನೆಟ್ಟಿಗರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ನಟ ಸಿಕಂದರ್ ಖೇರ್ ಕೂಡ ಸಚಿನ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವು ಬಳಕೆದಾರರು ಪ್ರಸ್ತುತ ಈ ಖಾದ್ಯವನ್ನು ಹೇಗೆ ಹಂಬಲಿಸುತ್ತಿದ್ದಾರೆಂದು ಸಹ ಬರೆದಿದ್ದಾರೆ.