
ದಾಲ್ ಮತ್ತು ಕಾಧಿಯ ಜೊತೆಗೆ ರೊಟ್ಟಿಯನ್ನು ಸವಿದಿದ್ದಾರೆ. ಆಲೂ ಸಬ್ಜಿ, ಭಿಂಡಿ, ದಾಲ್ ಬಾಟಿ ಸೇರಿದಂತೆ ಇನ್ನೂ ಅನೇಕ ರೀತಿಯ ಖಾದ್ಯಗಳನ್ನು ಆರ್ಡರ್ ಮಾಡಿದ್ದಾರೆ. ವಿಭಿನ್ನ ರೀತಿಯ ಚಟ್ನಿಗಳು ಮತ್ತು ಉಪ್ಪಿನಕಾಯಿಗಳು ಕೂಡ ತಮ್ಮ ಮೆನುವಿನಲ್ಲಿ ಸೇರಿಸಲಾಗಿತ್ತು. ಜೊತೆಗೆ ಮಜ್ಜಿಗೆ, ಗುಲಾಬ್ ಜಾಮೂನ್ ಮತ್ತು ಇತರ ಸಿಹಿತಿಂಡಿಗಳು ಕೂಡ ಇವೆ.
ಅಂಜಲಿಯ ಜನ್ಮದಿನವನ್ನು ಆಚರಿಸಲು ಶ್ರೀ ಠಾಕರ್ ಭೋಜನಾಲಯದಲ್ಲಿ ಉತ್ತಮ ಗುಜರಾತಿ ಥಾಲಿಯನ್ನು ಸವಿದಿರುವುದಾಗಿ ಸಚಿನ್ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಸಚಿನ್ ಹಾಗೂ ಕುಟುಂಬ ಸದಸ್ಯರು ಎಲ್ಲಾ ಖಾದ್ಯಗಳನ್ನು ಆನಂದಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ, 1945 ರಿಂದ ಈ ರೆಸ್ಟೋರೆಂಟ್ ನಡೆಯುತ್ತಿದೆ ಎಂದು ತಿಳಿದು ಆಶ್ಚರ್ಯವಾಯಿತು ಎಂದು ಸಚಿನ್ ತಿಳಿಸಿದ್ದಾರೆ.
ಇನ್ನು ಸಚಿನ್ ಕೇವಲ ಬ್ಯಾಟ್ ಬೀಸುವುದರಲ್ಲಿ ಮಾತ್ರ ನಿಪುಣರಲ್ಲ. ಮಾಜಿ ಕ್ರಿಕೆಟಿಗರು ಅಡುಗೆ ಮನೆಯಲ್ಲಿ ಸಹ ಕೈ ಚಳಕ ತೋರಿಸುತ್ತಾರೆ. ಅಂದ್ರೆ ಇವರಿಗೆ ಅಡುಗೆ ಮಾಡೋದಕ್ಕೂ ಬರುತ್ತದೆಯಂತೆ.!
