ಮಾಸ್ಟರ್ ಬ್ಲಾಸ್ಟರ್ ಚೊಚ್ಚಲ ಪಂದ್ಯವಾಡಿದ ಅಪರೂಪದ ಟಿಕೆಟ್ ಹಂಚಿಕೊಂಡ ಅಭಿಮಾನಿ 17-11-2021 8:49AM IST / No Comments / Posted In: Latest News, Live News, Sports ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು 15 ನವೆಂಬರ್ 1989 ರಂದು ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ವೇಳೆ ಮಾಸ್ಟರ್ ಬ್ಲಾಸ್ಟರ್ ಗೆ ಕೇವಲ 16 ವರ್ಷ ವಯಸ್ಸಾಗಿತ್ತು. ದೇಶಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ವ್ಯಕ್ತಿ ಎಂದು ಹೆಸರು ಪಡೆದಿದ್ದರು. ಸೋಮವಾರದಂದು ಸಾಮಾಜಿಕ ಜಾಲತಾಣದಲ್ಲಿ #SachinDebutDay ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದ್ದಂತೆ, ಅನೇಕ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಮಾಸ್ಟರ್ ಬ್ಲಾಸ್ಟರ್‌ನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಂತಹ ಅಭಿಮಾನಿಗಳಲ್ಲಿ ಒಬ್ಬರಾದ ನಿತಿನ್ ಸಚಿನಿಸ್ಟ್ ಎಂಬ ಟ್ವಿಟ್ಟರ್ ಬಳಕೆದಾರರು, ತೆಂಡೂಲ್ಕರ್ ಅವರ ಚೊಚ್ಚಲ ಪಂದ್ಯದ ಟಿಕೆಟ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಯೋಧರಿಂದ ಮಹಿಳೆಯರಿಗೆ ಕಿರಿಕಿರಿ: ಟಿಎಂಸಿ ಶಾಸಕನ ವಿವಾದಾತ್ಮಕ ಹೇಳಿಕೆ ಭಾರತ ಹಾಗೂ ಪಾಕಿಸ್ತಾನದ ವಿರುದ್ಧ ಕರಾಚಿಯಲ್ಲಿ ನಡೆದ ಪಂದ್ಯದ ಟಿಕೆಟ್ ಇದಾಗಿದೆ. ಫೋಟೋವನ್ನು ಹಂಚಿಕೊಂಡ ಅಭಿಮಾನಿ, ಇದು ತನ್ನ ಅಮೂಲ್ಯವಾದ ಸ್ಮರಣೀಯ ಟಿಕೆಟ್ ಎಂದು ಬರೆದಿದ್ದಾರೆ. ಇನ್ನು ವಿಶೇಷವೆಂದರೆ ಈ ಟಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಆಟೋಗ್ರಾಫ್ ಸಹ ಬರೆದಿದ್ದಾರೆ. ಟ್ವೀಟ್ ವೈರಲ್ ಆಗುತ್ತಿದ್ದಂತೆ, ತೆಂಡೂಲ್ಕರ್ ಕೂಡ ಟ್ವೀಟ್‌ಗೆ ಹೃದಯದ ಎಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಡಾ. ರಾಜಕುಮಾರ್, ಅಪ್ಪು ಸೇರಿ ಇದುವರೆಗೆ 10 ಮಂದಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಚೊಚ್ಚಲ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 41/4ರಲ್ಲಿ ಸಂಕಷ್ಟದಲ್ಲಿದ್ದಾಗ ತೆಂಡೂಲ್ಕರ್ ಕ್ರೀಸ್‌ಗೆ ಬಂದಿದ್ದರು. ಅವರು ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ 32 ರನ್ ಜೊತೆಯಾಟವನ್ನು ನಡೆಸಿದ್ದರು. ಪಾಕ್ ಆಟಗಾರ ಯೂನಿಸ್ ಅವರಿಂದ ಔಟಾಗುವ ಮೊದಲು 15 ರನ್ ಗಳಿಸಿದ್ದರು. ತೆಂಡೂಲ್ಕರ್ ಅವರು ನಿವೃತ್ತಿಯಾಗುವ ಮೊದಲು 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ 200 ನೇ ಟೆಸ್ಟ್ ಆಡಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನವನ್ನು ದಾಖಲೆಯ 15,921 ರನ್ ಮತ್ತು 51 ಶತಕಗಳೊಂದಿಗೆ ಕೊನೆಗೊಳಿಸಿದ್ದಾರೆ. My priceless memorable ticket @sachin_rt Thank you Sachin paaji for making us falling in love with Cricket 🙏🏻Thank you for always inspiring 🙏🏻#SachinDebutDay pic.twitter.com/7CCNgFmQxK — Nitin jain(Sachinsuperfan) (@NitinSachinist) November 15, 2021