BIG NEWS: ಅಫಿಡವಿಟ್ ನಲ್ಲಿ ಬಹಿರಂಗವಾಯ್ತು ಕಾಂಗ್ರೆಸ್ ನಾಯಕನ ವಿಚ್ಛೇದನ ವಿಚಾರ; 2 ದಶಕದ ದಾಂಪತ್ಯದಿಂದ ದೂರವಾದ ಸಚಿನ್ ಪೈಲಟ್ – ಸಾರಾ ಅಬ್ದುಲ್ಲಾ 31-10-2023 7:12PM IST / No Comments / Posted In: Latest News, India, Live News ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹಾಗೂ ಅವರ ಪತ್ನಿ ಸಾರಾ ಅಬ್ದುಲ್ಲಾ ತಮ್ಮ ದಾಂಪತ್ಯ ಜೀವನ ಮುರಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಶಕಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಸಚಿನ್ ಪೈಲಟ್ ರಾಜಸ್ಥಾನ ವಿಧಾನಸಭಾ ಚುನಾವಣೆ ಪ್ರಯುಕ್ತ ಸಲ್ಲಿಸಿದ ತಮ್ಮ ಅಫಿಡವಿಟ್ನಲ್ಲಿ ತನ್ನನ್ನು ತಾನು ಡಿವೋರ್ಸಿ ಎಂದು ಕರೆದುಕೊಂಡಿದ್ದಾರೆ. ಜಮ್ಮು & ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಪುತ್ರಿ ಸಾರಾ ಅಬ್ದುಲ್ಲಾ ಜೊತೆಯಲ್ಲಿ ತಮ್ಮ ವೈವಾಹಿಕ ಜೀವನ ಮುರಿದು ಬಿದ್ದಿರುವ ಬಗ್ಗೆ ಇದೇ ಮೊದಲ ಬಾರಿಗೆ ಸಚಿನ್ ಬಾಯ್ಬಿಟ್ಟಿದ್ದಾರೆ. ಅಂದಹಾಗೆ ಸಚಿನ್ ಪೈಲಟ್ ಮತ್ತು ಸಾರಾ ಅಬ್ದುಲ್ಲಾ ಪೈಲಟ್ 2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಆರನ್ ಹಾಗೂ ವಿಹಾನ್ ಎಂಬ ಇಬ್ಬರು ಪುತ್ರರಿದ್ದಾರೆ.