ಪಟ್ಟಣಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಂಡಲ ಮಕರವಿಳಕ್ಕು ಯಾತ್ರೆಗೆ ಇಂದು ತೆರೆ ಬೀಳಲಿದೆ. ವಾರ್ಷಿಕ 41 ದಿನಗಳ ಮಂಡಲ ಮಕರ ವಿಳಕ್ಕು ಯಾತ್ರೆ ನವೆಂಬರ್ 17ರಿಂದ ಆರಂಭವಾಗಿದ್ದು, ಸೋಮವಾರದವರೆಗೆ ಯಾತ್ರೆಯ ಅವಧಿಯಲ್ಲಿ 40 ದಿನಗಳಲ್ಲಿ 223 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಯಾತ್ರೆಯಲ್ಲಿ ಈ ಬಾರಿ 30 ಲಕ್ಷಕ್ಕೂ ಅಧಿಕ ಭಕ್ತರು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ. ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ಅಯ್ಯಪ್ಪ ಸ್ವಾಮಿ ದೇವಾಲಯ ಮುಚ್ಚಿರಲಿದ್ದು, ಡಿಸೆಂಬರ್ 30ರಂದು ಬಾಗಿಲು ತೆರೆದು ಮಕರವಿಳಕ್ಕು ಪೂಜೆಗಳು ಆರಂಭವಾಗಲಿವೆ. ಜನವರಿ 14ರಂದು ಮಕರ ಸಂಕ್ರಾಂತಿ ದಿನ ಮಕರ ಜ್ಯೋತಿ ದರ್ಶನವಾಗಲಿದೆ.