alex Certify ಶಬರಿಮಲೆಯಲ್ಲಿ ಡಿ. 27ರಂದು ಮಂಡಲ ಪೂಜೆ, ಜ. 15ರಂದು ಮಕರ ಸಂಕ್ರಮಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆಯಲ್ಲಿ ಡಿ. 27ರಂದು ಮಂಡಲ ಪೂಜೆ, ಜ. 15ರಂದು ಮಕರ ಸಂಕ್ರಮಣ

ಪಟ್ಟಣಂತಿಟ್ಟ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಡಿ. 27 ರಂದು ಮಂಡಲ ಪೂಜೆ, ಜ. 15ರಂದು ಮಕರ ಸಂಕ್ರಮಣ ನಡೆಯಲಿದೆ.

ಡಿಸೆಂಬರ್ 26ರಂದು ಸ್ವಾಮಿಗೆ ತಂಗ ಅಂಗಿ ಆಭರಣ ತೊಡಿಸಿ ದೀಪಾರಾಧನೆ ನಡೆಸಲಾಗುವುದು. ಡಿ. 27 ರಂದು ಮಂಡಲ ಕಾಲದ ತೀರ್ಥಾಟನೆಯ ಸಮಾರೋಪದ ಭಾಗವಾಗಿ ಮಂಡಲ ಪೂಜೆ ಹಾಗೂ ಜನವರಿ 15ರಂದು ಮಕರ ಸಂಕ್ರಮಣ ಪೂಜೆ ನೆರವೇರಿಸಲಾಗುವುದು.

ಆರುನ್ನಳ ಪಾರ್ಥಸಾರಥಿ ದೇವಾಲಯದಿಂದ ವೈಭವದ ಮೆರವಣಿಗೆ ಮೂಲಕ ತಂಗಾ ಅಂಗಿ ಆಭರಣ ತರುವ ಕಾರ್ಯ ಆರಂಭಗೊಂಡು ಡಿ. 26ರಂದು ಮಧ್ಯಾಹ್ನ ಪಂಪಾ ತಲುಪಲಿದೆ. ಅಲ್ಲಿಂದ ಆಭರಣಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಅಯ್ಯಪ್ಪ ಸೇವಾ ಸಂಘದ ಕಾರ್ಯಕರ್ತರು ಹೊತ್ತು ಸಂಜೆ ವೇಳೆಗೆ ಸನ್ನಿಧಾನಕ್ಕೆ ತಲುಪಲಿದ್ದಾರೆ. 18 ಮೆಟ್ಟಿಲುಗಳ ಮೂಲಕ ದೇವಾಲಯ ತಲುಪಿದಾಗ ತಂತ್ರಿ ಕಂಠಾರ್ ಮಹೇಶ್ ಮೋಹನರ್, ಪ್ರಧಾನ ಅರ್ಚಕ ಪಿ.ಎನ್. ಮಹೇಶ್ ಆಭರಣ ಪಡೆದು ಅಯ್ಯಪ್ಪನಿಗೆ ತೊಡಿಸಿದ ಬಳಿಕ ದೀಪಾರಾಧನೆ ನಡೆಯಲಿದೆ.

ಡಿಸೆಂಬರ್ 27 ರಂದು ಮಧ್ಯಾಹ್ನ ಮಂಡಲ ಪೂಜೆ, ರಾತ್ರಿ 10 ಗಂಟೆಗೆ ಹರಿವರಾಸನಂ ಗಾಯನದೊಂದಿಗೆ ದೇಗುಲ ಮುಚ್ಚುಲಾಗುವುದು. ಇದರೊಂದಿಗೆ ಮಂಡಲ ಕಾಲದ ತೀರ್ಥಾಟನೆ ಸಂಪನ್ನಗೊಳ್ಳಲಿದೆ.

ಡಿ. 30ರಂದು ಮಕರ ಜ್ಯೋತಿ ತೀರ್ಥಾಟನೆಗೆ ಮತ್ತೆ ದೇಗುಲದ ತೆರೆಯಲಾಗುತ್ತದೆ. ಈ ಬಾರಿ 2024ರ ಜನವರಿ 15ರಂದು ಮುಂಜಾನೆ 2.46ಕ್ಕೆ ಮಕರ ಸಂಕ್ರಮಣ ಪೂಜೆ ಹಾಗೂ ದರ್ಶನ ನಡೆಯಲಿದೆ. ಜನವರಿ 14ರ ಸಂಜೆ ಮಕರ ಜ್ಯೋತಿ ದರ್ಶನವಾಗಲಿದೆ. ಕವಡಿಯಾರ್ ಅರಮನೆಯಿಂದ ತುಪ್ಪ ತಂದು ಮಕರ ಸಂಕ್ರಮಣ ಮಹೂರ್ತದಲ್ಲಿ ಅಭಿಷೇಕ ನೆರವೇರಿಸಲಾಗುವುದು. ರಾತ್ರಿ ಮಕರ ಸಂಕ್ರಮಣ ಪೂಜೆ ಬರುವುದು ಈ ಬಾರಿಯ ವಿಶೇಷತೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...