
ಬೆಂಗಳೂರು: ಶಬರಿಮಲೆಗೆ ಹೋಗುವ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ವೋಲ್ವೋ ಬಸ್ ಕಾರ್ಯಾಚರಣೆ ನಡೆಸಲಾಗುವುದು.
ಬೆಂಗಳೂರಿನಿಂದ ನೀಲಕ್ಕಲ್ ವರೆಗೆ ವೋಲ್ವೋ ವಿಶೇಷ ಬಸ್ ಕಾರ್ಯಾಚರಣೆ ನಡೆಸಲಿದೆ. ನವೆಂಬರ್ 29ರಂದು ಮಧ್ಯಾಹ್ನ 1:50ಕ್ಕೆ ಶಾಂತಿನಗರದಿಂದ ಹೊರಡಲಿದೆ. ನವೆಂಬರ್ 30ರಂದು ಬೆಳಿಗ್ಗೆ 6.45ಕ್ಕೆ ನೀಲಕ್ಕಲ್ ತಲುಪಲಿದೆ. ನವೆಂಬರ್ 30ರಂದು ಸಂಜೆ 6 ಗಂಟೆಗೆ ನೀಲಕ್ಕಲ್ ನಿಂದ ಹೊರಟು ಬೆಂಗಳೂರಿಗೆ ತಲುಪಲಿದೆ. ಪ್ರಯಾಣಿಕರಿಗೆ 1750 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಾಹಿತಿ ನೀಡಲಾಗಿದೆ.