alex Certify ಶಬರಿಮಲೆಗೆ ದಾಖಲೆ ಸಂಖ್ಯೆಯ ಭಕ್ತರು: 357.47 ಕೋಟಿ ರೂ. ಆದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆಗೆ ದಾಖಲೆ ಸಂಖ್ಯೆಯ ಭಕ್ತರು: 357.47 ಕೋಟಿ ರೂ. ಆದಾಯ

ತಿರುವನಂತಪುರಂ: ಪ್ರಸಿದ್ಧ ಕ್ಷೇತ್ರ ಕೇರಳದ ಶಬರಿಮಲೆಯಲ್ಲಿ 2023 -24ನೇ ಸಾಲಿನ ಶಬರಿಮಲೆ ಮಂಡಲ ಮಕರ ಜ್ಯೋತಿ ಋತುವಿನಲ್ಲಿ 357.47 ಕೋಟಿ ರೂ. ಆದಾಯ ಬಂದಿದೆ ಎಂದು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.

ಕಳೆದ ವರ್ಷ 347.12 ಕೋಟಿ ರೂ. ಆದಾಯ ಲಭಿಸಿತ್ತು. ಈ ವರ್ಷ 10 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದೆ. ಅರವಣ ಮಾರಾಟದಿಂದ 146,99,37,700 ರೂಪಾಯಿ, ಅಪ್ಪಂ ಮಾರಾಟದಿಂದ 17,64,77,795 ರೂ. ಆದಾಯ ಬಂದಿದೆ. ಕಾಣಿಕೆಯಾಗಿ ಲಭಿಸಿದ ಹಣ ಎಣಿಕೆ ಇನ್ನೂ ಬಾಕಿ ಇದೆ. ಈ ಮೂಲಸ ಕನಿಷ್ಠ 10 ಕೋಟಿ ರೂ. ಆದಾಯ ಲಭಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಶಬರಿಮಲೆಗೆ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಿದ್ದು, 50 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಕಳೆದ ವರ್ಷ 44 ಲಕ್ಷ ಭಕ್ತರು ಆಗಮಿಸಿದ್ದರು. ಹೆಚ್ಚುವರಿಯಾಗಿ ಈ ವರ್ಷ 5 ಲಕ್ಷ ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ಈ ಬಾರಿ ಮಂಡಲ ಕಾಲ ಆರಂಭಕ್ಕೆ 7 ತಿಂಗಳ ಮೊದಲ ಸಿದ್ಧತೆ ಆರಂಭಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...