ಶಬರಿಮಲೆ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸಿದ್ದ ಮೂವರು ಭಕ್ತರು ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ತಂಗತ್ತೂರು ವಿಶ್ವ ಬ್ರಾಹ್ಮಣ ಬಜಾರ್ ನ ರಾಮ್ ಬಾಬು(40), ತಮಿಳುನಾಡು ವೆಲ್ಲೂರು ರಾಣಿಪೇಟೆ ಪ್ಯಾಲೇಸ್ ಸ್ಟ್ರೀಟ್ ನಿವಾಸಿ ಮಣಿಕಂಠನ್(45), ಪುದುಕೋಟೈ ಲೂಪುರ್ ತಾಲೂಕು ಅಂಬೇಡ್ಕರ್ ನಗರದ ಕಂದಸ್ವಾಮಿ(65) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಲ್ಲಿಡಾಂಕುವಿನಲ್ಲಿ ಹೃದಯಘಾತದಿಂದ ಅಸ್ವಸ್ಥರಾಗಿದ್ದ ರಾಮ್ ಬಾಬು ಅವರಿಗೆ ಸಿಪಿಆರ್ ನೀಡಿ ಕಾಳಕೆಟ್ಟಿಯ ತಾತ್ಕಾಲಿಕ ದವಾಖಾನೆಗೆ ತಲುಪಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.