ಪಟ್ಟಣಂತಿಟ್ಟ: ಕೇರಳದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಎರಡನೆಯ ಅಲೆ ಅಬ್ಬರದ ನಡುವೆ ಮಾಸಿಕ ಪೂಜೆಗೆ ಶಬರಿಮಲೆ ಸ್ವಾಮಿ ದೇವಾಲಯ ತೆರೆಯಲಾಗುತ್ತದೆ.
ಜುಲೈ 17 ರಿಂದ 21 ರವರೆಗೆ ಶಬರಿಮಲೆ ದೇವಾಲಯ ತೆರೆಯಲಿದ್ದು, ದರ್ಶನಕ್ಕೆ ಬರುವ ಭಕ್ತರಿಗೆ ಕೊರೋನಾ ಲಸಿಕೆ ಪಡೆದ ದಾಖಲೆ ಅಥವಾ ಕೊರೋನಾ ನೆಗೆಟಿವ್ ಆರ್.ಟಿ.ಪಿ.ಸಿ.ಆರ್. ವರದಿ ಕಡ್ಡಾಯವಾಗಿ ಹೊಂದಿರಬೇಕು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.
ಜುಲೈ 17 ರಿಂದ 21 ರವರೆಗೆ ದೇವಾಲಯ ತೆರೆದಿರುತ್ತದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಆನ್ ಲೈನ್ ಬುಕಿಂಗ್ ಮಾಡಬೇಕಿದೆ. ಕೊರೋನಾ ಲಸಿಕೆ ಪಡೆದುಕೊಂಡ ಪ್ರಮಾಣಪತ್ರ ಅಥವಾ 48 ಗಂಟೆಗಳ ಒಳಗೆ ನೀಡಲಾದ ಕೊರೋನಾ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಕೇರಳ ಪೊಲೀಸ್ ಮತ್ತು ದೇವಸ್ವಂ ಮಂಡಳಿ ವತಿಯಿಂದ ಕಳೆದ ವರ್ಷ ಯಾತ್ರಾರ್ಥಿಗಳಿಗೆ ವರ್ಚುವಲ್ ಕ್ಯೂ/ ಪ್ರಸಾದಂಗಳು/ಪೂಜಾ /ಸೌಕರ್ಯಗಳು /ಕನಿಕ್ಕಾ ಮುಂತಾದ ಸೇವೆಗಳನ್ನು ಕಾಯ್ದಿರಿಸಲು ಹೊಸ ಆನ್‌ಲೈನ್ ಪೋರ್ಟಲ್ ಪ್ರಾರಂಭಿಸಿತ್ತು. ಆನ್‌ಲೈನ್ ಸೇವೆಗಳನ್ನು ಪಡೆಯಲು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಹೊಂದಿರುವ ಯಾತ್ರಿಕರ ನೋಂದಣಿ ಕಡ್ಡಾಯವಾಗಿದೆ.
ದೇಶಾದ್ಯಂತ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ -19 ಪ್ರಕರಣಗಳಲ್ಲಿ ಕುಸಿತ ಕಂಡಿದದ್ದರೂ, ಕೇರಳದಲ್ಲಿ ಏಕಾಏಕಿ ಎರಡನೇ ಅಲೆ ಏರಿಕೆಯಾಗತೊಡಗಿದೆ.