ಕಾನ್ಪುರ: ಸಬರಮತಿ ಎಕ್ಸ್ ಪ್ರೆಸ್ ರೈಲಿನ 22 ಬೋಗಿಗಳು ಹಳಿ ತಪ್ಪಿ ಅವಘಡ ಸಂಭವಿಸಿರುವ ಘಟನೆ ಉತ್ತರಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣ ನಡುವೆ ಸಂಭವಿಸಿದೆ.
ಎಕ್ಸ್ ಪ್ರೆಸ್ ರೈಲು ವಾರಣಸಿಯಿಂದ ಗುಜರಾತ್ ನ ಅಹಮದಾಬಾದ್ ಗೆ ತೆರಳುತ್ತಿತ್ತು. ಇಂದು ನಸುಕಿನ ಜಾವ 2:30ರ ಸುಮಾರಿಗೆ ಕಾನ್ಪುರದ ಗೋವಿಂದಪುರಿ ಹೋಲ್ಡಿಂಗ್ ಬಳಿ ಹಳಿ ತಪ್ಪಿದೆ. ರೈಲಿನ 22 ಬೋಗಿಗಳು ಹಳಿತಪ್ಪಿವೆ.
ರೈಲಿನ ಇಂಜಿನ್ ಗೆ ಬಂಡೆಯೊಂದು ಬಡಿದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. 22 ಬೋಗಿಗಳು ಹಳಿತಪ್ಪಿದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ, ಪ್ರಯಾಣಿಕರಿಗೆ ಗಾಯದಂತಹ ತೊಂದರೆಗಳು ಆಗಿಲ್ಲ ಎಂದು ತಿಳಿದುಬಂದಿದೆ.