ದಾವಣಗೆರೆ: ಹರಿಹರ ಶಾಸಕರಿಗೆ ತಲೆ ಸರಿ ಇದ್ಯೋ ಇಲ್ವೋ? ಅವರ ತಲೆ ಕೆಟ್ಟಿರಬೇಕು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಚಿವ ಮಲ್ಲಿಕಾರ್ಜುನ ಜೊತೆ ರೇಣುಕಾಚಾರ್ಯ ಮತ್ತು ಉಳಿದ ನಾಯಕರು ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ ಎಂಬ ಶಾಸಕ ಬಿ.ಪಿ.ಹರೀಶ್ ಹೇಳಿಕೆಗೆ ಪ್ರತಿಕಿರಿಸುತ್ತಾ, ಶಾಸಕರಿಗೆ ತಲೆ ಕೆಟ್ಟಿರಬೇಕು ಎಂದರು.
ಇದೇ ಹರೀಶ್ ನಮ್ಮ ಮನೆಗೆ ಬಂದು ಸಿದ್ದೇಶ್ವರ್ ಅವರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಕಾಂಗ್ರೆಸ್ ನಲ್ಲಿದ್ದು ಈ ಹಿಂದೆ ಚುನಾವಣೆಯಲ್ಲಿ ನಮ್ಮ ಪರ ಪ್ರಚಾರ ಮಾಡಿದ್ದರು. ಆತ ಯಾವಾಗ ಯಾರ ಕಡೆ ಇರ್ತಾರೆ ಗೊತ್ತಿಲ್ಲ. ಪೇಪರ್ ನಲ್ಲಿ ತನ್ನ ಫೋಟೋ ಬರಬೇಕು ಎಂದು ಈಗ ಏನೇನೋ ಮಾತನಾಡುತ್ತಿದ್ದಾರೆ. ಜನ ಆಯ್ಕೆ ಮಾಡಿ ಕಲಿಸಿದ್ದಾರೆ. ಜನ ಸೇವೆಯನ್ನು ಮಾಡಲಿ ಎಂದು ಗುಡುಗಿದರು.