ನವದೆಹಲಿ: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಅಗಲಿಕೆಯಿಂದ ತೀವ್ರ ದು:ಖವಾಗಿದೆ ಎಂದು ಗದ್ಗದಿತರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಣ್ಣೀರಿಟ್ಟಿದ್ದಾರೆ.
ಎಸ್.ಎಂ.ಕೃಷ್ಣ ಇನ್ನಿಲ ಎಂಬ ಸುದ್ದಿ ಕೇಳಿ ಆಘಾತಗೊಂಡಿದ್ದೇನೆ. ಅವರ ಅಗಲಿಕೆ ತೀವ್ರ ದು:ಖವನ್ನುಂಟುಮಾಡಿದೆ ಎಂದು ಕಂಬನಿ ಮಿಡಿದಿದ್ದಾರೆ. ಮುತ್ಸದ್ದಿ ರಾಜಕಾರಣಿಯಾಗಿದ್ದ ಎಸ್. ಎಂ.ಕೃಷ್ಣ ಅಜಾತಶತ್ರುಗಳಾಗಿದ್ದರು.
ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದವರು. ಐಟಿ,ಬಿಟಿ ಕ್ಷೇತ್ರಕ್ಕೂ ಸಾಕಷ್ಟು ವೇಗವನ್ನು ನೀಡಿದವರು. ಎಲ್ಲಾ ಬಹಳ ಒಳ್ಳೆಯ ಹಾಗೂ ದೂರದರ್ಶಿತ್ವ ಇರಿವ ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಿರುವುದು ನೋವುಂಟುಮಾಡಿದೆ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಎಸ್.ಎಂ. ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.