ಕಾರವಾರ: ಸಂಪುಟ ವಿಸ್ತರಣೆಯ ಬಗ್ಗೆ ನನಗೆ ಗೊತ್ತಿಲ್ಲ, ಸಂಪುಟ ವಿಸ್ತರಣೆ ವಿಚಾರವಾಗಿ ನಾನು ತಲೆಕೆಡಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಅವರು ಮಾತನಾಡಿ, ನಾನು ಮಂತ್ರಿಯಾಗಬೇಕೆಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಸಂಪುಟ ವಿಸ್ತರಣೆಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಡಿನ್ನರ್ ಮೀಟಿಂಗ್ ಯಾಕೆ ನಡೆಯಬಾರದು ಎಂದು ಪ್ರಶ್ನಿಸಿದ ಅವರು, ಮನೆಯಲ್ಲಿ ಊಟ ಆಯೋಜಿಸಿ ಯಾರನ್ನೂ ಕರೆಯುವುದಿಲ್ಲವೇ? ಯಾವ ಬೆಳವಣಿಗೆಗಳೂ ಇಲ್ಲ. ಸ್ನೇಹಿತರನ್ನು ಊಟಕ್ಕೆ ಕರೆಯುತ್ತಾರೆ. ಇದಕ್ಕೆ ಹೆಚ್ಚಿನ ಮಹತ್ವ ಕೊಡಬಾರದು ಎಂದು ಹೇಳಿದ್ದಾರೆ.