ಐಪಿಎಲ್ 2021 ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಈ ಬಾರಿಯ ಸೀಸನ್‌ನಲ್ಲಿ ರನ್‌ಗಳ ಸುರಿಮಳೆಗರೆಯುವ ಮೂಲಕ ಭಾರೀ ಖ್ಯಾತಿ ಪಡೆದಿದ್ದಾರೆ.
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಲು ಪ್ರಮುಖ ಪಾತ್ರ ವಹಿಸಿದ ಋತುರಾಜ್, 14ನೇ ಸೀಸನ್‌ನಲ್ಲಿ ಶತಕವನ್ನೂ ಸಿಡಿಸಿದ್ದಾರೆ.
ಸೀಸನ್‌ನ ಮೊದಲ ಕೆಲವು ಪಂದ್ಯಗಳಲ್ಲಿ ವೈಫಲ್ಯ ಕಂಡರೂ ಬರುಬರುತ್ತಾ ಲಯ ಕಂಡುಕೊಂಡ ಋತುರಾಜ್, ಟೂರ್ನಿಯ ಗರಿಷ್ಠ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಸರಣಿಯಲ್ಲಿ ಒಟ್ಟಾರೆ 635 ರನ್‌ಗಳನ್ನು 45.35 ಸರಾಸರಿಯಲ್ಲಿ ಕಲೆಹಾಕಿದ ಋತುರಾಜ್ 136ರ ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ. 24 ವರ್ಷ ವಯಸ್ಸಿನ ಋತುರಾಜ್ ಆರೆಂಜ್ ಕ್ಯಾಪ್ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.
ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ IRCTC ಯಿಂದ ಗುಡ್ ನ್ಯೂಸ್
ಇಷ್ಟೆಲ್ಲಾ ಸಾಧನೆಗೈದು ಮನೆಗೆ ಮರಳಿದ ಋತುರಾಜ್ ಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಋತುರಾಜ್ ಮನೆಗೆ ಆಗಮಿಸುತ್ತಿರುವ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿಕೊಂಡಿದೆ.