
ದಕ್ಷಿಣ ಆಫ್ರಿಕಾದ ಲುಂಗಿ ನಿಗಿಡಿ ಎಸೆದ ಬಾಲ್ ಗಾಯಕ್ವಾಡ್ ತಲೆಯ ಮೇಲೆ ಹೋಗುತ್ತಿದ್ದಂತೆ ಬ್ಯಾಟ್ ಗೆ ಟಚ್ ಆಗಿ ಡ್ವೈನ್ ಪ್ರಿಟೋರಿಯಸ್ ಕೈಗೆ ಸೇಫ್ ಆಗಿ ತಲುಪಿತು. ಇದು ಗಾಯಕ್ವಾಡ್ ಗೆ ಅನಿರೀಕ್ಷಿತ ಔಟಾಗಿತ್ತು. ಇದರಿಂದ ಆದ ಕೋಪವನ್ನು ಗಾಯಕ್ವಾಡ್ ಮೈದಾನದ ಸಿಬ್ಬಂದಿ ಮೇಲೆ ತೀರಿಸಿಕೊಂಡಿದ್ದಾರೆ.
ಮೈದಾನದ ಸಿಬ್ಬಂದಿಗೆ ಅಗೌರವ ತೋರುವ ಮೂಲಕ ಗಾಯಕ್ವಾಡ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರಲ್ಲದೇ, ಅವರ ವರ್ತನೆಯನ್ನು ನೋಡಿದ ನೆಟ್ಟಿಗರು ಅತ್ಯುತ್ತಮ ಬ್ಯಾಟರ್ ಒಬ್ಬ ಈ ರೀತಿ ವರ್ತಿಸುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.
ಋತುರಾಜ್ ಗಾಯಕ್ವಾಡ್ ರದು ಅತ್ಯಂತ ಕೆಟ್ಟ ವರ್ತನೆಯಾಗಿದೆ. ತೆರೆಮರೆಯ ನಾಯಕರಂತೆ ದುಡಿಯುವ ಮೈದಾನದ ಸಿಬ್ಬಂದಿಗೆ ಈ ರೀತಿ ಅಗೌರವ ತೋರುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ನೆಟ್ಟಿಗರು ತಮ್ಮ ಸಿಟ್ಟನ್ನು ತೋಡಿಕೊಂಡಿದ್ದಾರೆ.
https://twitter.com/ReignOfVirat/status/1538521237584060418?ref_src=twsrc%5Etfw%7Ctwcamp%5Etweetembed%7Ctwterm%5E1538521237584060418%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fsports%2Fruturaj-gaikwad-trolled-for-disrespecting-ground-staff-after-dismissal-during-5th-t20i-between-ind-sa-video-goes-viral-watch-5463377%2F
— ARYAN_OP™ (@ARYAN__OP) June 19, 2022
https://twitter.com/cricketsangram/status/1538532313482469377?ref_src=twsrc%5Etfw%7Ctwcamp%5Etweetembed%7Ctwterm%5E1538532313482469377%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fsports%2Fruturaj-gaikwad-trolled-for-disrespecting-ground-staff-after-dismissal-during-5th-t20i-between-ind-sa-video-goes-viral-watch-5463377%2F