alex Certify ‘ತಾನು ಸಲಿಂಗಿಕಾಮಿ‘ ಸಂದರ್ಶನದಲ್ಲಿ ಗುಟ್ಟು ಬಿಚ್ಚಿಟ್ಟ ರಷ್ಯಾ ಟೆನ್ನಿಸ್ ತಾರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತಾನು ಸಲಿಂಗಿಕಾಮಿ‘ ಸಂದರ್ಶನದಲ್ಲಿ ಗುಟ್ಟು ಬಿಚ್ಚಿಟ್ಟ ರಷ್ಯಾ ಟೆನ್ನಿಸ್ ತಾರೆ..!

ಡೇರಿಯಾ ಕಸಟ್ಕಿನಾ, ರಷ್ಯಾ ಅಗ್ರಗಣ್ಯ ಮಹಿಳಾ ಟೆನಿಸ್ ಆಟಗಾರ್ತಿ. ಇತ್ತೀಚೆಗೆ ಆಕೆ ಸಂದರ್ಶನವೊಂದಲ್ಲಿ ಕೊಟ್ಟ ಹೇಳಿಕೆಯೊಂದು ಆಕೆಯ ಅಭಿಮಾನಿಗಳಿಗೆ ಶಾಕ್ ಮಾಡಿದೆ.

ಟೆನಿಸ್ ಕ್ರೀಡಾಂಗಣದಲ್ಲಿ ತನ್ನದೇ ಶೈಲಿಯಿಂದ ಆಟ ಆಡುವುದರಲ್ಲಿ ಫೇಮಸ್ ಆಗಿರುವ ಡೇರಿಯಾ ತಾನು ಸಲಿಂಗಕಾಮಿಯಾಗಿ ಬದಲಾಗಿದ್ದೇನೆ ಎಂದು ಆನ್‌ಲೈನ್ ಸಂದರ್ಶನವೊಂದರಲ್ಲಿ ಹೇಳಿದ್ಧಾರೆ.

ಈಗ ಆಕೆಯ ಹೇಳಿಕೆ ವೈರಲ್ ಆಗಿದೆ. ಡೇರಿಯಾ ಕಸಟ್ಕಿನಾ ಯುವ ಮತ್ತು ಭರವಸೆಯ ರಷ್ಯಾದ ಟೆನಿಸ್ ಆಟಗಾರ್ತಿಯಾಗಿದ್ದು, ಅವರು ಈಗಾಗಲೇ ಎರಡು ಡಬ್ಲ್ಯೂಟಿಎ ಪಂದ್ಯಾವಳಿಯನ್ನ ಗೆದ್ದಿದ್ದಾರೆ.

ಪ್ರಸ್ತುತ ವಿಶ್ವದ 12 ರ್ಯಾಂಕಿಂಗ್ ಆಟಗಾರ್ತಿಯಾಗಿರುವ ಈಕೆ ರಷ್ಯಾದ ಬ್ಲಾಗರ್ ವಿತ್ಯಾ ಕ್ರಾವ್ಚೆಂಕೊ ಎಂಬ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ್ದಾರೆ.

“Living With Closet” ಅಸಾಧ್ಯವೆಂದು ಹೇಳುವ ಮೂಲಕ ಕಸಟ್ಟಿನಾ, ತನ್ನ ಗೆಳತಿ ಫಿಗರ್ ಸ್ಕೇಟರ್ ನಟಾಲಿಯಾ ಜಬಿಯಾಕೊ ಅವರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಚಿತ್ರಗಳನ್ನ ಪೋಸ್ಟ್ ಮಾಡಿಕೊಂಡಿದ್ದಾರೆ.

ಉಸೇನ್ ಬೋಲ್ಟ್ ದಾಖಲೆ ಮುರಿದ ನಕಲಿ ದಾಖಲೆ ಸೃಷ್ಠಿಸಿ ವಂಚನೆ ಆರೋಪ: ಕಂಬಳವೀರ ಶ್ರೀನಿವಾಸಗೌಡ ವಿರುದ್ಧ ದೂರು

ಟ್ವಿಟರ್ ಪೋಸ್ಟ್‌ಲ್ಲಿ ಜಬಿಯಾಕೊ ನನ್ನ ಕ್ಯುಟಿಪೈ ಎಂದು ಕರೆದಿದ್ದಾರೆ. 2013ರಿಂದ ರಷ್ಯಾದಲ್ಲಿ LGBTQ ಸಂಬಂಧಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. 25 ವರ್ಷ ವಯಸ್ಸಿನ ಕಸಟ್ಕಿನಾ ಅವರು ವಿಶ್ವದಲ್ಲಿ 25ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ಸಂದರ್ಶನದಲ್ಲಿ, ಅವರು ಉಕ್ರೇನ್‌ನಲ್ಲಿ ನಡೆಸುತ್ತಿರುವ ದಾಳಿಯನ್ನ ಖಂಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...