ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೆದುಳು ಮತ್ತು ನರಮಂಡಲಕ್ಕೆ ಸಂಬಂಧಿಸಿದ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದಾರೆ.
ಹೀಗಾಗಿ, ಅವರು ಜನವರಿಯಲ್ಲಿ ರಷ್ಯಾ ಅಧ್ಯಕ್ಷರ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವ್ಲಾಡಿಮರ್ ಪುಟಿನ್ ಅವರ ಗೆಳತಿ ಮತ್ತು ಇಬ್ಬರು ಪುತ್ರಿಯರು ಅಧ್ಯಕ್ಷರ ಹುದ್ದೆ ತೊರೆಯುವಂತೆ ಸಲಹೆ ನೀಡಿದ್ದಾರೆ.
ರಾಜ್ಯಶಾಸ್ತ್ರಜ್ಞ ವಲೆರಿ ಸೊಲೊವೆಯಿ ಅವರ ಪ್ರಕಾರ, 68 ವರ್ಷ ವಯಸ್ಸಿನ ವ್ಲಾಡಿಮಿರ್ ಪುಟಿನ್ ಮೇಲೆ ಕುಟುಂಬವೊಂದರ ಪ್ರಭಾವ ಹೆಚ್ಚಾಗಿದ್ದು, ಜನವರಿಯಲ್ಲಿ ಅವರು ಹುದ್ದೆ ತೊರೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ದ ಸನ್ ಪತ್ರಿಕೆಯಲ್ಲಿಯೂ ಈ ಕುರಿತ ವರದಿ ಪ್ರಕಟಿಸಿದ್ದು, ಹುದ್ದೆ ತೊರೆಯುವ ಬಗ್ಗೆ ಸುಳಿವು ನೀಡಲಾಗಿದೆ. ಆದರೆ ಪುಟಿನ್ ಆಪ್ತವಲಯದಿಂದ ಪುಟಿನ್ ಅಧ್ಯಕ್ಷರ ಹುದ್ದೆ ತೊರೆಯುವ ವದಂತಿ ನಿರಾಕರಿಸಲಾಗಿದೆ.