alex Certify ವಸತಿ ಸಮುಚ್ಛಯದ ಮೇಲೆ ಅಪ್ಪಳಿಸಿದ ರಷ್ಯನ್ ಕ್ಷಿಪಣಿ; ಕಣ್ಣೀರಿಡುತ್ತಲೇ ಪರಿಸ್ಥಿತಿ ವಿವರಿಸಿದ ಉಕ್ರೇನ್ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಸಮುಚ್ಛಯದ ಮೇಲೆ ಅಪ್ಪಳಿಸಿದ ರಷ್ಯನ್ ಕ್ಷಿಪಣಿ; ಕಣ್ಣೀರಿಡುತ್ತಲೇ ಪರಿಸ್ಥಿತಿ ವಿವರಿಸಿದ ಉಕ್ರೇನ್ ಮಹಿಳೆ

ಕೇಂದ್ರ ಉಕ್ರೇನ್‌ನ ಉಮಾನ್‌ನ ವಸತಿ ಸಮುಚ್ಛಯವೊಂದಕ್ಕೆ ರಷ್ಯಾದ ಕ್ಷಿಪಣಿಯೊಂದು ಅಪ್ಪಳಿಸಿದ್ದು, ದೊಡ್ಡ ಮಟ್ಟದಲ್ಲಿ ಜೀವ ಹಾಗೂ ಆಸ್ತಿಗಳಿಗೆ ಹಾನಿಯಾಗಿದೆ. ತನ್ನ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡರೂ ಸಹ ಈ ದಾಳಿಯಲ್ಲಿ 19 ಮಂದಿ ಮೃತಪಟ್ಟಿದ್ದಾರೆ.

ಇದೇ ವೇಳೆ, ಮಹಿಳೆಯೊಬ್ಬರು ತಮ್ಮ ಪರಿಸ್ಥಿತಿಯ ಕುರಿತು ವಿವರಿಸುತ್ತಿರುವ ವಿಡಿಯೋವೊಂದು ಟ್ವಿಟರ್‌‌ನಲ್ಲಿ ವೈರಲ್ ಆಗಿದೆ.

ಕೈ ಹಾಗೂ ಮುಖದ ಮೇಲೆ ರಕ್ತದ ಕಲೆಗಳಿರುವ ಈ ಮಹಿಳೆ, ತನ್ನೂರಿನ ಪ್ರಸಕ್ತ ಪರಿಸ್ಥಿತಿಯನ್ನು ಕಣ್ಣೀರು ಹಾಕಿಕೊಂಡು ವಿವರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇರಿನಾ ಮಟ್ವಿಯಿಶಿನ್ ಹೆಸರಿನ ಪತ್ರಕರ್ತೆಯೊಬ್ಬರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...