ಉಕ್ರೇನ್ ಮೇಲೆ ರಷ್ಯಾ ಕಳೆದ 71 ದಿನಗಳಿಂದ ಯುದ್ಧ ಮುಂದುವರೆಸಿದೆ. 71 ದಿನಗಳಿಂದ ವಾರ್ ನಡೆಯುತ್ತಿದ್ದು ಪೋಲೆಂಡ್ ಸಮೀಪ ರಷ್ಯಾದಿಂದ ಮಿಸೈಲ್ ದಾಳಿ ನಡೆಸಲಾಗಿದೆ.
ಅಣಕು ಪರಮಾಣು ದಾಳಿಯನ್ನು ರಷ್ಯಾ ಸೇನೆ ನಡೆಸಿದ್ದು, ರಷ್ಯಾ ದಾಳಿಯಿಂದ ಯುರೋಪ್ ಭೀತಿಗೊಂಡಿದೆ. ಶಸ್ತ್ರಾಸ್ತ್ರ ಪೂರೈಕೆ ಗುರಿಯಾಗಿಸಿಕೊಂಡು ರಷ್ಯಾ ಸೇನೆ ದಾಳಿ ನಡೆಸಿದೆ. ನ್ಯಾಟೋ ರಾಷ್ಟ್ರಗಳಿಗೆ ರಷ್ಯಾ ಬಿಸಿ ಮುಟ್ಟಿಸುತ್ತಿದ್ದು, ರಷ್ಯಾ -ಉಕ್ರೇನ್ ಯುದ್ಧ 71 ದಿನಗಳ ನಂತರ ಮತ್ತೊಂದು ಹಂತಕ್ಕೆ ತಲುಪಿದೆ.
ವರದಿಯ ಪ್ರಕಾರ ಪೋಲೆಂಡ್ ಮತ್ತು ಲಿಥುವೇನಿಯಾ ನಡುವಿನ ಪ್ರದೇಶದ ಬಳಿ ಅಣಕು ಪರಮಾಣು ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ರಷ್ಯಾ ಘೋಷಿಸಿದೆ.
ರಷ್ಯಾದ ರಕ್ಷಣಾ ಸಚಿವಾಲಯವು ಕಲಿನಿನ್ ಗ್ರಾಡ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ದಾಳಿಗಳನ್ನು ನಡೆಸಿದೆ ಎಂದು ಮಾಸ್ಕೋ ಟೈಮ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಕಲಿನಿನ್ ಗ್ರಾಡ್ ರಷ್ಯಾದ ಮುಖ್ಯ ಭೂಭಾಗದಿಂದ ಬೇರ್ಪಟ್ಟ ರಷ್ಯಾದ ಸಣ್ಣ ಎನ್ ಕ್ಲೇವ್ ಆಗಿದೆ. ಇದು ಬಾಲ್ಟಿಕ್ ಸಮುದ್ರದಲ್ಲಿದೆ. ಯುರೋಪಿಯನ್ ಒಕ್ಕೂಟದ ದೇಶಗಳಾದ ಪೋಲೆಂಡ್ ಮತ್ತು ಲಿಥುವೇನಿಯಾದ ಗಡಿಯಲ್ಲಿದೆ.
ರಷ್ಯಾದ ಪರಮಾಣು ಸಾಮರ್ಥ್ಯದ ಇಸ್ಕಾಂಡರ್ ಮೊಬೈಲ್ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳು ಸಿಮ್ಯುಲೇಶನ್ ಸಮಯದಲ್ಲಿ ಯಾವುದೇ ಕ್ಷಿಪಣಿಗಳನ್ನು ಹಾರಿಸದೆ ಎಲೆಕ್ಟ್ರಾನಿಕ್ ಉಡಾವಣೆಗಳ ಸರಣಿಯ ಮೂಲಕ ಹಾರಿವೆ. ಕಲಿನಿನ್‌ಗ್ರಾಡ್‌ನಲ್ಲಿರುವ ರಷ್ಯಾದ ಪಡೆಗಳು ಶತ್ರುಗಳ ವಾಯುನೆಲೆಗಳು, ಮಿಲಿಟರಿ ಉಪಕರಣಗಳು ಮತ್ತು ಕಮಾಂಡ್ ಪೋಸ್ಟ್ ಗಳನ್ನು ಗುರಿಯಾಗಿಸಿ ವಿವಿಧ ರೀತಿಯ ದಾಳಿಗಳನ್ನು ನಡೆಸಿವೆ.