ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ತಮ್ಮ ಪ್ರಾಣ ಒತ್ತೆಯಿಟ್ಟು ಇನ್ನೊಬ್ಬನ ಜೀವ ಉಳಿಸಿದ ರಷ್ಯಾ ವೈದ್ಯರು ಈಗ ಚರ್ಚೆಯಲ್ಲಿದ್ದಾರೆ. ಆಸ್ಪತ್ರೆಗೆ ಬೆಂಕಿ ಬಿದ್ದಿದ್ದ ವೇಳೆ ವೈದ್ಯರು, ಓಪನ್ ಹಾರ್ಟ್ ಸರ್ಜರಿ ಮಾಡ್ತಿದ್ದರು. ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ಬಿಡದೆ, ತಮ್ಮ ಪ್ರಾಣ ಒತ್ತೆಯಿಟ್ಟು ರೋಗಿಯ ಜೀವ ಉಳಿಸಿದ್ದಾರೆ.
ಘಟನೆ ರಷ್ಯಾದ ಬ್ಲಾಗೊವೆಶ್ಚೆನ್ಸ್ಕ್ ನಲ್ಲಿ ನಡೆದಿದೆ. ತ್ಸಾರಿಸ್ಟ್ ಎರಾ ಆಸ್ಪತ್ರೆಯ ಮೇಲಿನ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಎರಡು ಗಂಟೆ ಸತತ ಪ್ರಯತ್ನ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಜಾಗದಲ್ಲಿ ಹೊಗೆ ಕಡಿಮೆ ಮಾಡಲು ಫ್ಯಾನ್ ಅಳವಡಿಸಲಾಗಿತ್ತಂತೆ. ವಿದ್ಯುತ್ ಗಾಗಿ ಬೇರೆ ಕೇವಲ್ ವ್ಯವಸ್ಥೆ ಮಾಡಲಾಗಿತ್ತು. ವೈದ್ಯರು ಯಾವುದೇ ಒತ್ತಡಕ್ಕೊಳಗಾಗದೆ ಚಿಕಿತ್ಸೆ ನಡೆಸಿದ್ದಾರೆ.
ಎಂಟು ವೈದ್ಯರ ತಂಡ ಹಾಗೂ ದಾದಿಯರು ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು. ಸರ್ಜರಿ ನಂತ್ರ ರೋಗಿಯನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆಸ್ಪತ್ರೆಯಲ್ಲಿದ್ದ 128ಕ್ಕೂ ಹೆಚ್ಚು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಬೆಂಕಿ ಕಾಣಿಸಿಕೊಂಡಿದ್ದ ಕಟ್ಟಡ 1907ರಲ್ಲಿ ಕಟ್ಟಿದ ಹಳೆ ಕಟ್ಟಡ.