ಪೂರ್ವ ಉಕ್ರೇನ್ ನಲ್ಲಿ ಅಂಗಡಿ ಮೇಲೆ ರಷ್ಯಾದ ದಾಳಿನಡೆಸಿ 48 ಜನರನ್ನು ಕೊಂದಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ತಿಳಿಸಿದ್ದಾರೆ
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಗುರುವಾರ ಪೂರ್ವ ನಗರದ ಕುಪಿಯಾನ್ಸ್ಕ್ ಬಳಿ ಅಂಗಡಿಯೊಂದಕ್ಕೆ ಅಪ್ಪಳಿಸಿದ ರಷ್ಯಾದ ಫಿರಂಗಿ ದಾಳಿಯಲ್ಲಿ ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಕುಪಿಯಾನ್ಸ್ಕ್ ಜಿಲ್ಲೆಯ ಗ್ರೋಜ್ನಾ ಗ್ರಾಮದಲ್ಲಿನ ಕೆಫೆ ಮತ್ತು ಅಂಗಡಿಯ ಮೇಲೆ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿವೆ ಎಂದು ಖಾರ್ಕಿವ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಓಲೆಹ್ ಸಿನೆಹುಬೊವ್ ಹೇಳಿದ್ದಾರೆ.
ಇಂದು ಸುಮಾರು 13:15 ಕ್ಕೆ, ಕುಪಿಯಾನ್ಸ್ಕ್ ಜಿಲ್ಲೆಯ ಗ್ರೋಜಾ ಗ್ರಾಮದಲ್ಲಿ ಅನೇಕ ನಾಗರಿಕರು ಇದ್ದ ಕೆಫೆ ಮತ್ತು ಅಂಗಡಿಯೊಂದರ ಮೇಲೆ ರಷ್ಯನ್ನರು ಶೆಲ್ ದಾಳಿ ಮಾಡಿದರು ಎಂದು ತಿಳಿಸಿದ್ದಾರೆ.
ಸದ್ಯಕ್ಕೆ 6 ವರ್ಷದ ಬಾಲಕ ಸೇರಿದಂತೆ 48 ಮಂದಿ ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.
1 ಮಗು ಸೇರಿದಂತೆ 6 ಜನರು ಗಾಯಗೊಂಡಿದ್ದಾರೆ. ವೈದ್ಯರು ಅವರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸ್ಪೇನ್ಗೆ ಭೇಟಿ ನೀಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಸಾಮಾನ್ಯ ಕಿರಾಣಿ ಅಂಗಡಿಯ ಮೇಲೆ ರಾಕೆಟ್ ದಾಳಿ ನಡೆಸಿದ ರಷ್ಯಾ ಅಪರಾಧ ಎಸಗಿದೆ. ಇದರು ಉದ್ದೇಶಪೂರ್ವಕ ಭಯೋತ್ಪಾದಕ ದಾಳಿ ಎಂದು ಹೇಳಿದ್ದಾರೆ.