ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ನಗರದಲ್ಲಿ ಬೆತ್ತಲೆ ಮಹಿಳೆಯರ ವಿಡಿಯೋ ವೈರಲ್ ಆಗಿದ್ದು, ದೃಶ್ಯ ಚಿತ್ರೀಕರಣ ಮಾಡಿದ್ದ ರಷ್ಯಾದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಎತ್ತರದ ಬಾಲ್ಕನಿಯಲ್ಲಿ ಹಲವಾರು ಮಹಿಳೆಯರನ್ನು ಬೆತ್ತಲೆ ಚಿತ್ರೀಕರಿಸಿದ್ದಕ್ಕಾಗಿ ದುಬೈನ ಪೊಲೀಸರು ರಷ್ಯಾದ ನಾಗರಿಕನನ್ನು ಬಂಧಿಸಿದ್ದಾರೆ ಎಂದು ರಷ್ಯಾದ ರಾಜತಾಂತ್ರಿಕರೊಬ್ಬರು ಮಂಗಳವಾರ ಹೇಳಿದ್ದಾರೆ,
ನಗ್ನ ಫೋಟೋ ಶೂಟ್ ನ ದೃಶ್ಯಗಳು ವೈರಲ್ ಆಗಿದ್ದು, ಕೊಲ್ಲಿ ಅರಬ್ ಶೇಖ್ಡೋಮ್ ನಲ್ಲಿ ಹಲ್ ಚಲ್ ಸೃಷ್ಠಿಸಿದೆ. ಫೋಟೋ ಶೂಟ್‌ನಲ್ಲಿ ಬೆತ್ತಲೆಯಾಗಿ ನಿಂತಿದ್ದ ಒಂದು ಡಜನ್‌ಗೂ ಹೆಚ್ಚು ವಿದೇಶಿ ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ, ಛಾಯಾಗ್ರಾಹಕ ರಷ್ಯಾದ ಪೌರತ್ವವನ್ನು ಹೊಂದಿದ್ದಾನೆ ಎಂದು ದುಬೈನ ರಷ್ಯಾದ ಉಪ ಕಾನ್ಸುಲ್ ಇವಾನ್ ಗುಬಾನೋವ್ ದಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಛಾಯಾಗ್ರಾಹಕನ ಹೆಸರನ್ನು ಬಹಿರಂಗ ಮಾಡಿಲ್ಲ. ಮಹಿಳೆಯರು ಯಾವ ದೇಶದವರು ಎನ್ನುವುದನ್ನು ತಿಳಿಸಿಲ್ಲ. ಗುಬಾನೋವ್ ಅವರು ದುಬೈ ಪೊಲೀಸರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಸಿದ್ಧತೆ ನಡೆಸಿರುವ ಬಗ್ಗೆ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ, ದುಬೈ ಪೊಲೀಸರು ಬೆತ್ತಲೆ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಒಂದು ಗುಂಪನ್ನು ಬಂಧಿಸಿರುವುದಾಗಿ ಪ್ರಕಟಿಸಿದರು. ಹಗಲು ಹೊತ್ತಿನಲ್ಲಿ ಬಾಲ್ಕನಿಯಲ್ಲಿ ಬೆತ್ತಲೆ ಮಹಿಳೆಯರು ಕಾಣಿಸಿಕೊಂಡ ದೃಶ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಘಾತ ಮೂಡಿಸಿವೆ. ಸಾರ್ವಜನಿಕ ನಡವಳಿಕೆ ಮತ್ತು ಅಭಿವ್ಯಕ್ತಿಯನ್ನು ನಿಯಂತ್ರಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿರುವ ಯುಎಇ ನಲ್ಲಿ ಇಸ್ಲಾಮಿಕ್ ಕಾನೂನು ಬಿಗಿಯಾಗಿದೆ.
ಯುಎಇಯಲ್ಲಿ ನಗ್ನತೆ ಮತ್ತು ಇತರ ಅಸಭ್ಯ ವರ್ತನೆ ಸೇರಿದಂತೆ ಸಾರ್ವಜನಿಕ ಸಭ್ಯತೆಯ ಕಾನೂನಿನ ಉಲ್ಲಂಘನೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 5,000 ದಿರ್ಹಾಮ್ (1,360 ಡಾಲರ್) ದಂಡವನ್ನು ವಿಧಿಸುತ್ತದೆ. ಅಶ್ಲೀಲ ವಿಡಿಯೋ ಹಂಚಿಕೊಳ್ಳುವುದು ಜೈಲು ಶಿಕ್ಷೆ ಮತ್ತು ಭಾರಿ ದಂಡದೊಂದಿಗೆ ಶಿಕ್ಷಾರ್ಹ ಅಪರಾಧವಾಗಿದೆ. ದೇಶದ ಬಹುಪಾಲು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಗಳು ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿವೆ.