alex Certify BREAKING NEWS: 29 ಪ್ರಯಾಣಿಕರಿದ್ದ ರಷ್ಯಾ ವಿಮಾನ ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: 29 ಪ್ರಯಾಣಿಕರಿದ್ದ ರಷ್ಯಾ ವಿಮಾನ ನಾಪತ್ತೆ

29 ಮಂದಿ ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನವು ರಷ್ಯಾದ ಪೂರ್ವದಲ್ಲಿ ಕಾಣೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

29 ಪ್ರಯಾಣಿಕರನ್ನ ಹೊಂದಿದ್ದ ಈ ವಿಮಾನದಲ್ಲಿ 6 ಮಂದಿ ವಿಮಾನಯಾನ ಸಿಬ್ಬಂದಿ ಸಹ ಇದ್ದರು ಎನ್ನಲಾಗಿದೆ.

ಕಮ್ಚಟ್ಕಾ ಪ್ರಾಂತ್ಯದ ರಷ್ಯಾದ ತುರ್ತು ಸಚಿವಾಲಯದ ಮುಖ್ಯ ನಿರ್ದೇಶನಾಲಯ ನೀಡಿರುವ ಮಾಹಿತಿಯ ಪ್ರಕಾರ ಪೆಟ್ರೊಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ಪಲಾನಾಗೆ ಹೊರಟಿದ್ದ ಪ್ರಯಾಣಿಕ ವಿಮಾನ ಕಣ್ಮರೆಯಾಗಿದೆ ಎಂಬ ಮಾಹಿತಿ ನೀಡಿದೆ. ಈ ವಿಮಾನವು ಎಲ್ಲಾ ಸಂಪರ್ಕವನ್ನ ಕಳೆದುಕೊಂಡಿದೆ ಎಂದು ಸಚಿವಾಲಯದ ಪ್ರಾದೇಶಿಕ ಇಲಾಖೆ ಮಾಹಿತಿ ನೀಡಿದೆ. ವಿಮಾನ ಪತ್ತೆಗಾಗಿ ಹೆಚ್ಚಿನ ತನಿಖೆ ಮುಂದುವರಿದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...