alex Certify ರೋಬೋಟ್​ ಡಾಗ್​ ಅನಾವರಣಗೊಳಿಸಿದ ರಷ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಬೋಟ್​ ಡಾಗ್​ ಅನಾವರಣಗೊಳಿಸಿದ ರಷ್ಯಾ

ರಕ್ಷಣಾ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ತಂತ್ರಜ್ಞಾನ ಬಳಕೆ ಹೆಚ್ಚೆಚ್ಚು ಮಾಡಲಾಗುತ್ತಿದೆ. ರಷ್ಯಾದ ವಾರ್ಷಿಕ ಅಂತರಾಷ್ಟ್ರೀಯ ವೆಪನ್​ ಎಕ್ಸ್​ಪೋದಲ್ಲಿ ರೋಬೋಟ್​ ನಾಯಿ ಆಂಟಿ-ಟ್ಯಾಂಕ್​ ರಾಕೆಟ್​ ಲಾಂಚರ್​ ಅನ್ನು ಪ್ರದರ್ಶಿಸಿದ್ದು, ಅದರ ಬೆನ್ನಿನಲ್ಲಿ ಕಟ್ಟಿಕೊಂಡಿರುವ ಹೊಸ ಉತ್ಪನ್ನ ಸಹ ಅನಾವರಣಗೊಂಡಿದೆ.

ನಿಂಜಾ ಉಡುಗೆಯಲ್ಲಿ ರೋಬೋಟ್​ ನಾಯಿಯನ್ನು ರಷ್ಯಾ ಪ್ರದರ್ಶಿಸಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಚೀನೀ ಆನ್​ಲೈನ್​ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಗ್ರಾಹಕ ಮಟ್ಟದ ರೋಬೋಟಿಕ್​ ನಾಯಿಯ ಹೋಲಿಕೆಯಿದ್ದು, ಇದರ ಪಾತ್ರ ಮಾತ್ರ ಬಹಳ ದೊಡ್ಡದು.
“ಎಂ-81 ಕಾಂಪ್ಲೆಕ್ಸ್​” ಎಂದು ಕರೆಯಲ್ಪಡುವ ಪ್ರಾಣಿ ರೂಪದ ಈ ಉತ್ಪನ್ನವನ್ನು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಕಾಣುತ್ತದೆ.

ಅದು ನಡೆಯುವುದು, ಮಲಗುವುದು ಮತ್ತು ತಿರುಗುವುದನ್ನು ನೋಡಬಹುದಾಗಿದೆ. ರೋಬೋಟಿಕ್​ ನಾಯಿಯ ಸೃಷ್ಟಿಕರ್ತ ಮೆಷಿನ್​ ಇಂಟೆಲೆಕ್ಟ್​ ಎಂಬ ಸಣ್ಣ ತಾಂತ್ರಿಕ ಸಂಸ್ಥೆ. ಈ ನಾಯಿಯು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಮತ್ತು ಶೂಟ್​ ಮಾಡುವ ಸಾಮರ್ಥ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ.

ಗುರಿ ಆಯ್ಕೆ, ಗಸ್ತು ತಿರುಗುವಿಕೆ ಮತ್ತು ಭದ್ರತೆ, ನಾಗರಿಕ ಕರ್ತವ್ಯಗಳಲ್ಲಿ ಔಷಧಿಯನ್ನು ಒಯ್ಯುವುದು, ಸುತ್ತಲೂ ನೋಡುವುದು ಮತ್ತು ವಿಪತ್ತು ಪ್ರದೇಶಗಳಲ್ಲಿ ಕಡಿದಾದ ಪ್ರದೇಶ ದಾಟುವುದು ಸೇರಿ ಅನೇಕ ಕೆಲಸ ಮಾಡಲಿದೆ.

ಟ್ಯಾಂಕರ್​ ಉಡಾಯಿಸಲು ಬಳಸುವ ರಾಕೆಟ್​ ಲಾಂಚರ್​ನೊಂದಿಗೆ ಅದು ಶಸ್ತ್ರಸಜ್ಜಿತವಾಗಿದೆ, ಅದು ಲೋಡ್​ ಮಾಡಿದಾಗ 3 ಕೆಜಿ ವರೆಗೆ ತೂಗುತ್ತದೆ ಮತ್ತು ಆಪ್ಟಿಕಲ್​ ಗುರಿ ವ್ಯವಸ್ಥೆಯನ್ನು ಹೊಂದಿದೆ. ರೊಬೊಟಿಕ್​ ನಾಯಿಯ ಆಪ್ಟಿಕಲ್​ ಸೆನ್ಸರ್​ಗಳ ಮೇಲ್ಭಾಗವನ್ನು ಅದು ಧರಿಸಿದ್ದ ಕಪ್ಪು ಬಟ್ಟೆಯ ಕವರ್​ನಿಂದ ಮುಚ್ಚಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...