ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತೀವ್ರವಾಗುತ್ತಿದೆ. ರಷ್ಯಾ ಉಕ್ರೇನ್‌ನ ಹಲವು ನಗರಗಳಲ್ಲಿ ಕದನ ವಿರಾಮ ಘೋಷಿಸಿದ್ರು, ಹಲವು ಕಡೆ ದಾಳಿ ನಡೆಯುತ್ತಲೇ ಇದೆ. ಈಗಾಗ್ಲೇ ಹಲವು ನಗರಗಳ ಮೇಲೆ ದಾಳಿ ನಡೆಸಿರುವ ಪುಟಿನ್ ಪಡೆ ಉಕ್ರೇನ್‌ನ ಉಳಿದ ಭಾಗಗಳತ್ತ ಸಾಗುತ್ತಿದೆ. ಈ ವೇಳೆ ಯೇಸುಕ್ರಿಸ್ತನ ಶಿಲ್ಪವನ್ನು, ರಷ್ಯಾದ ಪಡೆಯಿಂದ ರಕ್ಷಿಸಲು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
BIG NEWS: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಡಿ.ಕೆ.ಶಿವಕುಮಾರ್ ಗೆ ಹೊಸ ಜವಾಬ್ದಾರಿ ನೀಡಿದ ಹೈಕಮಾಂಡ್
ಹೌದು, ಎಲ್ವಿವ್‍ನ ಅರ್ಮೇನಿಯನ್ ಕ್ಯಾಥೆಡ್ರಲ್‍ನಲ್ಲಿರುವ ಯೇಸುಕ್ರಿಸ್ತನ ಶಿಲ್ಪವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪೂರ್ವ ಯುರೋಪಿಯನ್ ಮಾಧ್ಯಮ ಸಂಸ್ಥೆ ನೆಕ್ಸ್‌ಟಾ ಮಂಗಳವಾರ ವರದಿ ಮಾಡಿದೆ. ರಷ್ಯಾ ನಡೆಸುತ್ತಿರುವ ದಾಳಿಯಿಂದ ಕ್ರಿಸ್ತನ ಶಿಲ್ಪಕ್ಕೆ ಯಾವುದೇ ಹಾನಿಯಾಗಬಾರದು ಎಂಬ ಕಾರಣಕ್ಕಾಗಿ, ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ, ಅಂದರೆ 1939-1945ರ ಸಮಯದಲ್ಲಿ ಕ್ಯಾಥೆಡ್ರಲ್ ಚರ್ಚ್‍ನಿಂದ ಕೊನೆಯ ಬಾರಿಗೆ ಈ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಆಗಲೂ ಶಿಲ್ಪವನ್ನು ರಕ್ಷಿಸಲು ಹೀಗೆ ಮಾಡಲಾಗಿತ್ತು. ಈಗಲೂ ಅದೇ ಕಾರಣಕ್ಕೆ ಶಿಲ್ಪವನ್ನು ಸ್ಥಳಾಂತರಿಸಲಾಗಿದೆ.