ಕಳೆದ 34 ದಿನಗಳಿಂದ ನಡೆಯುತ್ತಿರುವ ರಷ್ಯಾ -ಯುಕ್ರೇನ್ ಯುದ್ಧದ ನಡುವೆ ಬೆಳವಣಿಗೆಯೊಂದು ನಡೆದಿದೆ. ರಷ್ಯಾ ಮತ್ತು ಉಕ್ರೇನ್ ಶಾಂತಿ ಮಾತುಕತೆಯ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸು ಸಿಕ್ಕಿದೆ.
ಉಕ್ರೇನ್ ನ ಕೀವ್ ಮತ್ತು ಚೆರ್ನಿಹಿವ್ ನಲ್ಲಿ ದಾಳಿ ತೀವ್ರಗೊಳಿಸದಿರಲು ರಷ್ಯಾ ಸಮ್ಮತಿಸಿದೆ. ಇಸ್ತಾಂಬುಲ್ ನಲ್ಲಿ ನಡೆದ ಮಾತುಕತೆಯಲ್ಲಿ ರಷ್ಯಾ ಸಮ್ಮತಿ ನೀಡಿದೆ. ಭಾರಿ ಪ್ರಮಾಣದ ದಾಳಿಯನ್ನು ನಿಲ್ಲಿಸಲು ರಷ್ಯಾ ಒಪ್ಪಿಗೆ ಸೂಚಿಸಿದೆ. ಉಭಯ ದೇಶಗಳ ನಿಯೋಗ ಮಟ್ಟದ ಮಾತುಕತೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ಉಕ್ರೇನಿಯನ್ ರಾಜಧಾನಿ ಕೈವ್ ಬಳಿ ಮಾಸ್ಕೋ ತನ್ನ ಮಿಲಿಟರಿ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ಹೇಳಿದ್ದಾರೆ.