ಕೈವ್: ಶಾಂತಿ ಮಾತುಕತೆ ನಡುವೆ ಖಾರ್ಕಿವ್ ಮೇಲೆ ರಾಕೆಟ್ ದಾಳಿ ನಡೆಸಲಾಗಿದ್ದು, ಡಜನ್ ಗಟ್ಟಲೆ ಜನ ಸಾವು ಕಂಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಮತ್ತೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಸೋಮವಾರ ಬೆಳಗ್ಗೆ ಉಕ್ರೇನ್ ನಗರದ ಖಾರ್ಕಿವ್ ಮೇಲೆ ರಷ್ಯಾದ ಮಿಲಿಟರಿ ರಾಕೆಟ್ ದಾಳಿಯಲ್ಲಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಖಾರ್ಕಿವ್‌ನಲ್ಲಿ ಪ್ರಬಲ ದಾಳಿ ನಡೆದಿದೆ ಎಂದು ಉಕ್ರೇನಿಯನ್ ಆಂತರಿಕ ಸಚಿವಾಲಯದ ಸಲಹೆಗಾರ ಆಂಟನ್ ಹೆರಾಶ್ಚೆಂಕೊ ಹೇಳಿದ್ದಾರೆ. ರಾಕೆಟ್ ದಾಳಿಯಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ.
ಈ ನಡುವೆ ಬೆಲಾರಸ್ ನಲ್ಲಿ ರಷ್ಯಾ-ಉಕ್ರೇನ್ ಮಾತುಕತೆ ನಡೆಯುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಿಯೋಗ ಮಾತುಕತೆಗಾಗಿ ಬೆಲಾರಸ್ ತಲುಪಿದೆ. ರಷ್ಯಾದೊಂದಿಗಿನ ಮಾತುಕತೆಯ ಮುಖ್ಯ ಗುರಿಯು ತಕ್ಷಣದ ಕದನ ವಿರಾಮ ಮತ್ತು ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿದೆ ಎಂದು ಉಕ್ರೇನ್ ಅಧ್ಯಕ್ಷೀಯ ಕಚೇರಿ ಹೇಳಿದೆ.
ಮಾತುಕತೆಯ ಮೊದಲು, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಮಾತುಕತೆ ಯಶಸ್ವಿಯಾಗಬೇಕೆಂದು ನಾವು ನಿರೀಕ್ಷಿಸುವುದಿಲ್ಲ, ಆದರೆ ಶಾಂತಿಗಾಗಿ ಪ್ರಯತ್ನಿಸುವುದರಲ್ಲಿ ಯಾವುದೇ ಹಾನಿ ಇಲ್ಲ ಎಂದು ಹೇಳಿದರು.
ಮತ್ತೊಂದೆಡೆ, ಉಕ್ರೇನ್ ಮೇಲೆ ದಾಳಿ ಮಾಡಲು ರಷ್ಯಾ ಪರಮಾಣು ತಂತ್ರಗಳನ್ನು ಪ್ರಾರಂಭಿಸಿದೆ ಎಂದು ರಷ್ಯಾದ ಮಾಧ್ಯಮಗಳು ಹೇಳಿಕೆ ನೀಡಿವೆ. ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೆಯ್ ಶೋಯಿಗು ಅವರು ತಮ್ಮ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಲ್ಲಾ ಪರಮಾಣು ಕ್ಷಿಪಣಿಗಳನ್ನು ಫೈರಿಂಗ್ ಮೋಡ್‌ನಲ್ಲಿ ಇರಿಸಲಾಗಿದೆ. ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಲು ತಿಳಿಸಲಾಗಿದೆ.
ಸಂಧಾನಗಳು ನಡೆಯುತ್ತಿರುವಾಗ ಖಾರ್ಕಿವ್‌ನ ಬೃಹತ್ GRAD ಶೆಲ್ ದಾಳಿಯ ನಂತರ ಡಜನ್ಗಟ್ಟಲೆ ಜನ ಕೊಲ್ಲಲ್ಪಟ್ಟಿದ್ದು, ನೂರಾರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಆಂತರಿಕ ಸಚಿವಾಲಯವು ಹೇಳಿದೆ.