ಮಾಸ್ಕೋ/ಕೈವ್: ನಾಳೆ ಸಂಜೆ 6.30 ರೊಳಗೆ ಮಾತುಕತೆಗೆ ಬರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಸರ್ಕಾರಕ್ಕೆ ತಿಳಿಸಿದ್ದಾರೆ. ಬೆಲಾರಸ್ ರಾಜಧಾನಿ ಮಿನ್ಸ್ಕ್ ನಲ್ಲಿ ಚರ್ಚೆಗೆ ಬರಲು ಗಡುವು ನೀಡಿದ್ದಾರೆ. ಉಕ್ರೇನ್ ಸರ್ಕಾರಕ್ಕೆ ಲಾಸ್ಟ್ ಚಾನ್ಸ್ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ರಷ್ಯಾ ಜೊತೆಗೆ ಉಕ್ರೇನ್ ಸರ್ಕಾರ ಮಾತುಕತೆಗೆ ಒಪ್ಪಿದ್ದು, ಬೆಲಾರಸ್ ಗೆ ನಿಯೋಗ ಹೋಗ್ತಿದೆ. ಬೆಲಾರಸ್ ನ ಮಿನ್ಸ್ಕ್ ನಗರಕ್ಕೆ ನಿಯೋಗ ತೆರಳಲಿದೆ. ಈಗಾಗಲೇ ರಷ್ಯಾ ನಿಯೋಗ ರಾಜ್ಯಧಾನಿ ಬೆಲಾರಸ್ ರಾಜಧಾನಿ ಮಿನ್ಸ್ಕ್ ನಗರದಲ್ಲಿದ್ದು, ಉಭಯ ದೇಶಗಳ ನಡುವೆ ಮಾತುಕತೆ ನಡೆಯಲಿದೆ. ಯುದ್ಧ ನಿಲ್ಲಿಸುವ ಶಾಂತಿ ಮಾತುಕತೆಗೆ ಉಕ್ರೇನ್ ಗೆ ರಷ್ಯಾ ಡೆಡ್ಲೈನ್ ನೀಡಿತ್ತು. ಡೆಡ್ಲೈನ್ ಬೆನ್ನಲ್ಲೇ ಉಕ್ರೇನ್ ಮಾತುಕತೆಗೆ ಮುಂದಾಗಿದೆ.
ರಷ್ಯಾ ಉಕ್ರೇನ್ ಒಪ್ಪಿದರೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವುದಾಗಿ ಪ್ಯಾಲೆಸ್ತೀನ್ ಪ್ರಧಾನಿ ಹೇಳಿದ್ದಾರೆ. ಈ ಕುರಿತಾಗಿ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಫೋನ್ ಮೂಲಕ ಚರ್ಚೆ ನಡೆಸಿದ್ದಾರೆ.