
ನವದೆಹಲಿ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಬೆಂಬಲ ಯಾಚಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಮ್ಮನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ ಝೆಲೆನ್ ಸ್ಕೀ ನಿಮ್ಮ ಬೆಂಬಲ ಬೇಕಿದೆ ಎಂದು ಹೇಳಿದ್ದು, ಸಂಘರ್ಷದ ವಾತಾವರಣ ನಿಲ್ಲಿಸಿ ಎಂದು ದೂರವಾಣಿ ಕರೆ ಮೂಲಕ ಮೋದಿಗೆ ಕೋರಿದ್ದಾರೆ.
ರಷ್ಯಾದ ಒಂದು ಲಕ್ಷ ಸೈನಿಕರು ದಾಳಿ ಮಾಡಿದ್ದಾರೆ. ವಸತಿ ಪ್ರದೇಶಗಳ ಮೇಲೆ ದಾಳಿಯಾಗುತ್ತಿದೆ. ಭದ್ರತಾ ವಿಚಾರದಲ್ಲಿ ನಿಮ್ಮ ಬೆಂಬಲ ಬೇಕು. ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಝೆಲೆನ್ ಸ್ಕೀ ಮಾತನಾಡಿದ್ದು, ರಷ್ಯಾ ಹಿಮ್ಮೆಟ್ಟಿಸುವ ಆಕ್ರಮಣದ ಹಾದಿಯ ಬಗ್ಗೆ ತಿಳಿಸಲಾಗಿದೆ. 100,000 ಕ್ಕೂ ಹೆಚ್ಚು ಆಕ್ರಮಣಕಾರರು ಉಕ್ರೇನ್ ನಲ್ಲಿದ್ದಾರೆ. ಅವರು ವಸತಿ ಕಟ್ಟಡಗಳ ಮೇಲೆ ಗುಂಡು ಹಾರಿಸುತ್ತಾರೆ. ಆಕ್ರಮಣಕಾರರನ್ನು ನಿಲ್ಲಿಸಿ. ಭದ್ರತಾ ಮಂಡಳಿಯಲ್ಲಿ ನಮಗೆ ರಾಜಕೀಯ ಬೆಂಬಲ ನೀಡುವಂತೆ ಮೋದಿಗೆ ಝೆಲೆನ್ ಸ್ಕೀ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.