
13 ದಿನಗಳಿಂದ ಯುದ್ಧ ಮುಂದುವರೆದಿದ್ದರೂ, ಎದೆಗುಂದದೆ ಹೋರಾಟ ನಡೆಸುತ್ತಿರುವ ಉಕ್ರೇನ್ ಮಟ್ಟಹಾಕಲು ರಷ್ಯಾ ಸತತ ಪ್ರಯತ್ನ ನಡೆಸಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹತ್ಯೆಗೆ ರಷ್ಯಾ ಪ್ರಯತ್ನ ನಡೆಸಿದೆ. ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಕ್ಕೆ ಪಡೆದು ಜಯಂತಿಯನ್ನು ಹತ್ಯೆ ಮಾಡಿ ತನ್ನ ಕೈಗೊಂಬೆಯಾಗಿರುವ ಸರ್ಕಾರವನ್ನು ರಚನೆ ಮಾಡಲು ಮುಂದಾಗಿದೆ.
ರಷ್ಯಾ ಸೇನೆಯ ರಹಸ್ಯ ಪಡೆಗಳು ಮೂರು ಬಾರಿ ಝೆಲೆನ್ ಸ್ಕಿ ಅವರನ್ನು ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ. ಝೆಲೆನ್ ಸ್ಕಿ ಪೋಲೆಂಡ್ ಗೆ ಪರಾರಿಯಾಗಿದ್ದಾರೆ ಎಂದು ರಷ್ಯಾ ಹೇಳತೊಡಗಿದೆ.
ಆದರೆ, ನಾನು ದೇಶವನ್ನು ತೊರೆದಿಲ್ಲ. ಉಕ್ರೇನ್ ನಲ್ಲಿದ್ದು, ಹೋರಾಟ ನಡೆಸುತ್ತಿರುವುದಾಗಿ ಝೆಲೆನ್ ಸ್ಕಿ ಕೌಂಟರ್ ಕೊಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಉಕ್ರೇನ್ ರಷ್ಯಾ ಕೈವಶವಾಗಲು ಬಿಡುವುದಿಲ್ಲವೆಂದು ಹಕೌಂಟರ್ ಕೊಡುತ್ತಿದ್ದಾರೆ. ನ್ಯಾಟೋ ಪಡೆ ಮತ್ತು ಅಮೆರಿಕ ಸೇನೆಯ ಭದ್ರತೆಯಲ್ಲಿ ರಹಸ್ಯ ಸ್ಥಳದಲ್ಲಿ ಝೆಲೆನ್ ಸ್ಕಿ ಇದ್ದಾರೆ ಎಂದು ಹೇಳಲಾಗಿದೆ.
ಭೂಮಿ, ವಾಯು, ಸಮುದ್ರ ಮಾರ್ಗದ ಮೂಲಕ ನಿರಂತರವಾಗಿ ರಷ್ಯಾ ದಾಳಿ ನಡೆಸುತ್ತಿದ್ದರ, ಉಕ್ರೇನ್ ಎದೆಗುಂದದೆ ಹೋರಾಟ ಮುಂದುವರಿಸಿದೆ. ಚೇತರಿಸಿಕೊಳ್ಳಲು ಸಾಧ್ಯವಾಗದಂತೆ ಅಪಾರ ಪ್ರಮಾಣದ ಹಾನಿಯಾಗಿದ್ದರೂ ಉಕ್ರೇನ್ ಹೋರಾಟ ನಡೆಸಿದೆ. ಈ ನಡುವೆ ಝೆಲೆನ್ ಸ್ಕಿ ಅವರನ್ನು ಹತ್ಯೆ ಮಾಡಿ ತನ್ನ ಕೈಗೊಂಬೆ ಸರ್ಕಾರವನ್ನು ಪ್ರತಿಷ್ಠಾಪಿಸಲು ರಷ್ಯಾದಿಂದ ಪ್ರಯತ್ನ ಮುಂದುವರೆದಿದೆ. ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸಿದೆ.