ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನಲೆಯಲ್ಲಿ ರಷ್ಯಾ ಮೇಲೆ ಅನೇಕ ದೇಶಗಳು ನಿರ್ಬಂಧ ಹೇರಿವೆ.
ನಿರ್ಬಂಧ ಹೇರಿದ ದೇಶಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೆಡ್ಡು ಹೊಡೆದಿದ್ದು, ನಿಮ್ಮ ನಿರ್ಬಂಧಕ್ಕೆ ನಾವು ಬೆದರುವುದಿಲ್ಲ. ನಾವು ಕೂಡ ನಿಮ್ಮ ದೇಶಗಳ ಮೇಲೆ ನಿರ್ಬಂಧ ಹೇರುತ್ತೇವೆ ಎಂದು ಗುಡುಗಿದ್ದಾರೆ. ಈ ಮೂಲಕ ನಿರ್ಬಂಧ ಹೇರಿದ ದೇಶಗಳಿಗೆ ವಾರ್ನಿಂಗ್ ಮಾಡಿದ್ದಾರೆ.
ವಿವಿಧ ದೇಶಗಳ ನಿರ್ಬಂಧಕ್ಕೆ ಸೆಡ್ಡು ಹೊಡೆದ ಪುಟಿನ್, ನಾವು ನಿರ್ಬಂಧಕ್ಕೆ ಬಗ್ಗುವುದಿಲ್ಲವೆಂದು ಗುಡುಗಿದ್ದಾರೆ. ರಷ್ಯಾಗೆ ಫ್ರಾನ್ಸ್ ಮತ್ತು ಅಮೆರಿಕ ನಿರ್ಬಂಧ ಹೇರಿವೆ. ಇಟಲಿ, ಜಪಾನ್ ಸೇರಿ ನಿರ್ಬಂಧ ವಿಧಿಸಿದ ಹಲವು ದೇಶಗಳಿಗೆ ಪುಟಿನ್ ಎಚ್ಚರಿಕೆ ನೀಡಿದ್ದಾರೆ.