ಮಾಸ್ಕೋ: ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ರಷ್ಯಾ ನಿಷೇಧಿಸಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ಅನೇಕ ದೇಶಗಳು ರಷ್ಯಾದ ವಿಮಾನಗಳನ್ನು ನಿರ್ಬಂಧಿಸಿದ್ದು, ಇದಕ್ಕೆ ತಿರುಗೇಟು ನೀಡಲು ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ರಷ್ಯಾ ನಿಷೇಧಿಸಲು ನಿರ್ಧರಿಸಿದೆ.
ರಷ್ಯಾದ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಅಥವಾ ರಷ್ಯಾದಲ್ಲಿ ನೋಂದಾಯಿಸಲ್ಪಟ್ಟಿರುವ ನಾಗರಿಕ ವಿಮಾನಗಳ ಮೇಲೆ ಯುರೋಪಿಯನ್ ನಿಷೇಧಕ್ಕೆ ಪ್ರತೀಕಾರದ ಕ್ರಮವಾಗಿ ನಿರ್ಬಂಧ ಹೇರಲಾಗಿದೆ ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.
ರಷ್ಯಾ ತನ್ನ ವಿಮಾನಗಳ ಮೇಲಿನ ನಿಷೇಧಕ್ಕೆ ಪ್ರತಿಕ್ರಿಯೆಯಾಗಿ ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ಹಾರಾಟವನ್ನು ನಿಷೇಧಿಸುವುದಾಗಿ ಘೋಷಿಸಿದೆ. ರಷ್ಯಾದ ವಿಮಾನಯಾನ ಸಂಸ್ಥೆಗಳು ಈಗ ಬಹುಪಾಲು ಯುರೋಪಿಯನ್ ರಾಷ್ಟ್ರಗಳು ಮತ್ತು ಕೆನಡಾದ ವಾಯುಪ್ರದೇಶವನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಖಾಸಗಿ ಜೆಟ್‌ಗಳು ಸೇರಿದಂತೆ ರಷ್ಯಾದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಯುರೋಪಿಯನ್ ಯೂನಿಯನ್ ಭಾನುವಾರ ಘೋಷಿಸಿತ್ತು.