
Daily wrap ಈ ಕುರಿತಂತೆ ವರದಿ ಮಾಡಿದ್ದು, ಇದರ ವಿಡಿಯೋ ಜುಲೈ 23 ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಈಗಾಗಲೇ ಲಕ್ಷಾಂತರ ವೀಕ್ಷಣೆಗಳು ಬಂದಿವೆ.
ವಿಡಿಯೋದಲ್ಲಿ ಕಂಡು ಬಂದಂತೆ 13ನೇ ಅಂತಸ್ತಿನಿಂದ ಬೀಳುವ ಈ ಯುವತಿ ಕಟ್ಟಡದ ಮುಂಭಾಗದ ಹುಲ್ಲಿನ ಹಾಸಿನ ಮೇಲೆ ಬಿದ್ದಿದ್ದಾಳೆ. ಅವಳಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿದ್ದು ಕೂಡಲೇ ಎದ್ದು ಕುಳಿತಿದ್ದಾಳೆ. ಆಕೆಯನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಜೀವಾಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.