ಮಡಿಕೇರಿ: ರಾಜ್ಯದ ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಇತರೆ ರಾಜ್ಯಗಳ ವಿವಿಧ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಸುಮಾರು 10710 ಹುದ್ದೆಗಳನ್ನು ನೇಮಿಸಿಕೊಳ್ಳಲು ಐಬಿಪಿಎಸ್(IBPS) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪದವೀಧರ ಅಭ್ಯರ್ಥಿಗಳು ಜೂನ್, 28 ರೊಳಗೆ www.ibps.in website ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೂ ಸಹ ಬರೆಯಲು ಅವಕಾಶವಿರುತ್ತದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಸನ ಗ್ರಾಮೀಣ ಬ್ಯಾಂಕ್ ಗಳಲ್ಲಿ ಕರ್ನಾಟಕದಲ್ಲಿಯೇ ಉದ್ಯೋಗ ದೊರೆಯುತ್ತದೆ.
ಕೃಷಿಕ್ ಸರ್ವೋದಯ ಫೌಂಡೇಶನ್ ಬೆಂಗಳೂರು ಐ.ಎ.ಎಸ್/ಕೆ.ಎ.ಎಸ್/ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ವಿಷಯ ತಜ್ಞರಿಂದ ಜುಲೈ 1 ರಿಂದ ಆನ್‍ಲೈನ್/ಆಫ್ ಲೈನ್ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುವುದು. ಆರ್ಥಿಕ ದುರ್ಬಲ ಮತ್ತು ಪ್ರತಿಭಾವಂತರಿಗೆ ಎಂಡೋಮೆಂಟ್ ವಿದ್ಯಾರ್ಥಿ ವೇತನವನ್ನು ತರಬೇತಿಗೆ ಸೇರ್ಪಡೆಯಾದಲ್ಲಿ ಕೊಡಲಾಗುವುದು. ಅರ್ಹ ಆಕಾಂಕ್ಷಿಗಳು ಜೂನ್, 28 ರೊಳಗೆ www.krishiksarvodayafoundation.org ಮೂಲಕ ಅಥವಾ ಮೊಬೈಲ್ ಸಂಖ್ಯೆ 9910344332/8660217739 ಕ್ಕೆ ಕರೆ ಮಾಡಿ/ವಾಟ್ಸಾಪ್ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ.