
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಕಾಟ್ ವೆಲ್ಷ್ ತನ್ನ ಸ್ನೇಹಿತ ಅಲನ್ ಫಾಲ್ ಅವರೊಂದಿಗೆ ಜರ್ಸಿ ಮ್ಯಾರಥಾನ್ ಅನ್ನು
ಪೂರ್ಣಗೊಳಿಸಿದಾಗ, ಅವರು ವಿಶ್ವ ದಾಖಲೆಯನ್ನು ಮಾಡಿದ್ದಾರೆ ಎಂದು ಅವರಿಗೆ ತಿಳಿದಿರಲಿಲ್ಲ.
ಅವರ 3 ಗಂಟೆ 48 ನಿಮಿಷ 12 ಸೆಕೆಂಡುಗಳ ಓಟದ ವಿಶೇಷವೆಂದರೆ ಅವರ ವೇಷಭೂಷಣವು ಕ್ರೀಡಾ ಉಡುಪುಗಳ ಬದಲಿಗೆ, ಐಸ್ ಕ್ರೀಮ್ ವೇಷಭೂಷಣಗಳನ್ನು ಧರಿಸಿದ್ದರು.
ತನ್ನ ಮೊದಲ ಮ್ಯಾರಥಾನ್ ಅನ್ನು ಓಡಿದ ವೆಲ್ಶ್, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ರಹಸ್ಯವಾಗಿ ಅರ್ಜಿ ಸಲ್ಲಿಸಿದ್ದ. ಆದರೆ ನಿಜಕ್ಕೂ ಅದು ವಿಶ್ವ ದಾಖಲೆ ಆಗುತ್ತದೆ ಎಂದುಕೊಂಡಿರಲಿಲ್ಲ. ಐಸ್ ಕ್ರೀಮ್ ಮೇಲಿನ ಪ್ರೀತಿಯನ್ನು ಆಚರಿಸಲು ಇಬ್ಬರು ಸ್ನೇಹಿತರು 42-ಕಿಲೋಮೀಟರ್ ಮ್ಯಾರಥಾನ್ ಓಡಿ ಈ ದಾಖಲೆ ಬರೆದಿದ್ದಾರೆ.
ಜರ್ಸಿಯ ವಿಕ್ಟೋರಿಯಾ ಕಾಲೇಜಿನಲ್ಲಿ 32 ವರ್ಷದ ದೈಹಿಕ ಶಿಕ್ಷಣ ಶಿಕ್ಷಕ ಅಲನ್, ಫುಟ್ಬಾಲ್ ಮೂಲಕ ವೈಯಕ್ತಿಕ ತರಬೇತುದಾರ ಸ್ಕಾಟ್ ಅವರನ್ನು ಭೇಟಿಯಾದರು. ಇಬ್ಬರೂ ಪ್ರತಿಸ್ಪರ್ಧಿ ತಂಡಗಳಿಗಾಗಿ ಆಡಿದರು, ನಂತರ ಶೀಘ್ರದಲ್ಲೇ ಸ್ನೇಹಿತರಾದರು. ನಂತರ ಇಬ್ಬರೂ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.