ನವದೆಹಲಿ: ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ನಿಯಮಗಳನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.
ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡುವ ನಿಯಮಗಳನ್ನು ಸರ್ಕಾರವು ಶೀಘ್ರದಲ್ಲೇ ಹೊರಡಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ(CEC) ಹೇಳಿದ್ದಾರೆ, ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಮತದಾರರಿಗೆ ಸ್ವಯಂಪ್ರೇರಿತವಾಗಿರುತ್ತದೆ, ಆದರೆ ಹಾಗೆ ಮಾಡದವರು “ಸಾಕಷ್ಟು ಕಾರಣಗಳನ್ನು ನೀಡಬೇಕು ಎಂದು ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, CEC ಆಗಿ ಅಧಿಕಾರಾವಧಿಯಲ್ಲಿ ನಡೆದ ಎರಡು ಪ್ರಮುಖ ಚುನಾವಣಾ ಸುಧಾರಣೆಗಳೆಂದರೆ 18 ವರ್ಷ ತುಂಬಿದವರನ್ನು ಮತದಾರರಾಗಿ ನೋಂದಾಯಿಸಲು ಒಂದು ವರ್ಷದಲ್ಲಿ ನಾಲ್ಕು ದಿನಾಂಕಗಳನ್ನು ನೀಡಿರುವುದು ಮತ್ತು ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದಾಗಿದೆ ಎಂದು ಹೇಳಿದ್ದಾರೆ.