ವರ್ಷದ ಕೊನೆ ತಿಂಗಳು ಶುರುವಾಗಿದೆ. ಡಿಸೆಂಬರ್ ತಿಂಗಳ ಆರಂಭದ ಜೊತೆಗೆ ಅನೇಕ ಸರ್ಕಾರಿ ಹಾಗೂ ಖಾಸಗಿ ಸೇವೆಗಳಲ್ಲಿ ಬದಲಾವಣೆಯಾಗಿದೆ. ಈ ಬದಲಾವಣೆ ಜನಸಾಮಾನ್ಯರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿದರ : ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಗ್ರಾಹಕರಿಗೆ ಹಿನ್ನಡೆಯಾಗಿದೆ. ಡಿಸೆಂಬರ್ ಮೊದಲ ದಿನದಿಂದ ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ ದರದಲ್ಲಿ ಕಡಿತವಾಗಿದೆ. ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ ದರಗಳನ್ನು ವಾರ್ಷಿಕ ಶೇಕಡಾ 2.90 ರಿಂದ ಶೇಕಡಾ 2.80ಕ್ಕೆ ಇಳಿಸಿದೆ.
ಬೆಂಕಿ ಪೊಟ್ಟಣದ ಬೆಲೆ ಹೆಚ್ಚಳ : ಹಣದುಬ್ಬರ ಏರಿಕೆಯ ನಡುವೆಯೇ ಜನ ಸಾಮಾನ್ಯರಿಗೆ ಮತ್ತೊಂದು ಹಿನ್ನಡೆಯಾಗಿದೆ. 14 ವರ್ಷಗಳ ನಂತರ ಇಂದಿನಿಂದ ಬೆಂಕಿಕಡ್ಡಿ ಬೆಲೆ ದುಪ್ಪಟ್ಟಾಗಿದೆ. ಇಂದಿನಿಂದ 1 ರೂಪಾಯಿಗೆ ಸಿಗುವ ಬೆಂಕಿಕಡ್ಡಿ 2 ರೂಪಾಯಿಗೆ ಸಿಗಲಿದೆ.
ಜಿಯೋ ರೀಚಾರ್ಜ್ ಯೋಜನೆ ದುಬಾರಿ: ಜಿಯೋ ಇಂದಿನಿಂದ ತನ್ನ ಟ್ಯಾರಿಫ್ ಯೋಜನೆಗಳನ್ನು ದುಬಾರಿ ಮಾಡಿದೆ. ಜಿಯೋದ 75 ರೂಪಾಯಿ ಯೋಜನೆ ಇಂದಿನಿಂದ 91 ರೂಪಾಯಿಯಾಗಿದೆ. 129 ರೂಪಾಯಿ ಯೋಜನೆ ಈಗ 155 ರೂಪಾಯಿಯಾಗಿದೆ.
ಟಿವಿ ದುಬಾರಿ : ಇಂದಿನಿಂದ ಟಿವಿ ದುಬಾರಿಯಾಗಿದೆ. ಸ್ಟಾರ್ ಪ್ಲಸ್, ಕಲರ್ಸ್, ಸೋನಿ ಮತ್ತು ಝೀ ನಂತಹ ಚಾನೆಲ್‌ಗಳ ಬೆಲೆ ಶೇಕಡಾ 35ರಿಂದ 50ರಷ್ಟು ಹೆಚ್ಚಾಗಿದೆ. ಸೋನಿ ಚಾನೆಲ್‌ಗಳನ್ನು ವೀಕ್ಷಿಸಲು ಗ್ರಾಹಕರು, 39 ರೂಪಾಯಿ ಬದಲು 71 ರೂಪಾಯಿ ಪಾವತಿಸಬೇಕಾಗಿದೆ. ಝೀ ಚಾನೆಲ್ 39 ರೂಪಾಯಿ ಬದಲು 49 ರೂಪಾಯಿಗೆ ಲಭ್ಯವಿದೆ. ವಯಾಕಾಮ್ 18 ಚಾನೆಲ್‌ಗಳು 25 ರೂಪಾಯಿ ಬದಲು 39 ರೂಪಾಯಿಗೆ ಸಿಗಲಿದೆ.