ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಮಕು ತಡೆಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಹಿರಿಯ ಸಚಿವರ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮದುವೆಗೆ ಪಾಸ್ ಕಡ್ಡಾಯಗೊಳಿಸಲಾಗಿದೆ. ಜಾತ್ರೆಗೆ ನಿಷೇಧ ಹೇರಲಾಗಿದೆ.
ಮದುವೆ, ಇನ್ನಿತರ ಸಮಾರಂಭಗಳ ಆಯೋಜಕರು ಪೊಲೀಸರಿಂದ ಮೊದಲೇ ಪಾಸ್ ಪಡೆಯಬೇಕು. ಪಾಸ್ ಗಳನ್ನು ಮದುವೆ ಇನ್ನಿತರ ಸಮಾರಂಭದಲ್ಲಿ ಭಾಗವಹಿಸುವವರಿಗೆ ಆಯೋಜಕರು ಮೊದಲೇ ನೀಡಬೇಕು.
ಕಲ್ಯಾಣಮಂಟಪದ ಒಳಗೆ ಗರಿಷ್ಠ 100 ಜನ ಸೇರಬಹುದು. ಹೊರಾಂಗಣದ ಮದುವೆಗಳಿಗೆ, ಸಮಾರಂಭಗಳಿಗೆ 200 ಜನ ಸೇರಬಹುದು. ನಿಗದಿಗಿಂತ ಹೆಚ್ಚು ಜನ ಸೇರಿ ಕಲ್ಯಾಣಮಂಟಪಕ್ಕೆ ಬೀಗ ಹಾಕಲಾಗುತ್ತದೆ. ರಾಜ್ಯದಲ್ಲಿ ಎಲ್ಲಿ ಜಾತ್ರೆ ನಡೆದರೂ ಡಿಸಿ, ಎಸ್ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಜನರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಬಾರದು ಎಂದು ಹೇಳಲಾಗಿದೆ.