ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕು ಭಾರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರಿಂದ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಕಠಿಣ ನಿರ್ಬಂಧ ಜಾರಿಗೊಳಿಸುವಂತೆ ಸಲಹೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಬೇಕು. ಅಗತ್ಯ ಸೇವೆಯಲ್ಲಿಯೂ 50:50 ನಿಯಮ ಇರಬೇಕು. ಕಠಿಣ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿಗೊಳಿಸಬೇಕು. ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಸೇವೆ ಒದಗಿಸಬೇಕು ಎಂದು ಹೇಳಲಾಗಿದೆ.
ಅಗತ್ಯ, ತುರ್ತು ಸೇವೆ ಒದಗಿಸುವವರಿಗೆ ಅವಕಾಶ ನೀಡಬೇಕು. ದಿನಸಿ, ತರಕಾರಿ, ಹಾಲು, ಹಣ್ಣು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಮುಂದಿನ 15 ದಿನಗಳ ಕಾಲ ಶಾಲೆ-ಕಾಲೇಜುಗಳನ್ನು ಬಂದ್ ಮಾಡಬೇಕು. ಜಿಮ್, ಕ್ಲಬ್, ಪಾರ್ಕ್, ಈಜುಕೊಳ ಬಂದ್ ಮಾಡಬೇಕು. ಸಿನಿಮಾ ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಮಾಲ್ ಗಳಲ್ಲಿ ನಿರ್ಬಂಧ ಹೇರಬೇಕು. ಮಾರ್ಕೆಟ್ ಗಳ ವಿಕೇಂದ್ರಿಕರಣದ ಜೊತೆಗೆ ದೇಗುಲಗಳಲ್ಲಿ ನಿರ್ಬಂಧ, ತುರ್ತು ಕೆಲಸ ಬಿಟ್ಟು ಉಳಿದವರಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಅವಕಾಶ ಕಲ್ಪಿಸಬೇಕೆಂದು ಸಲಹೆ ನೀಡಲಾಗಿದೆ.