ಬೆಂಗಳೂರು: ಕೊರೋನಾ ತಡೆಗೆ ರಾಜ್ಯದಲ್ಲಿಯೂ ಕಠಿಣ ನಿಯಮ ಜಾರಿಗೆ ತರುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.
ಲಾಕ್ಡೌನ್ ಜಾರಿ ಮಾಡುವುದಿಲ್ಲ ಎಂದು ಈಗಾಗಲೇ ಸಿಎಂ ಸೇರಿ ಅನೇಕ ನಾಯಕರು ಸ್ಪಷ್ಟಪಡಿಸಿದ್ದು, ಲಾಕ್ಡೌನ್ ಬದಲಿಗೆ ಕಠಿಣ ನಿಯಮ ಜಾರಿಗೆ ತರಲಾಗುವುದು. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮೊದಲಾದ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ.
ಅಂತರ ರಾಜ್ಯ ನಿರ್ಬಂಧ ಹೇರಿ, ಜಿಲ್ಲೆಗಳ ನಡುವೆಯೂ ಸಂಪರ್ಕ ಕಟ್ ಮಾಡುವ ಸಾಧ್ಯತೆ ಇದೆ. ಯಾರು ಬರುವಂತಿಲ್ಲ, ಹೋಗುವಂತಿಲ್ಲ. ಮೊದಲು ಇದ್ದಂತೆ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಂಕು ಹೆಚ್ಚಿದ ರಾಜ್ಯಗಳ ಪ್ರಯಾಣಿಕರಿಗೆ ಕಡಿವಾಣ ಹಾಕಲಿದ್ದು, ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ರಾಜ್ಯಾದ್ಯಂತ ಕರ್ಫ್ಯೂ ವಿಸ್ತರಿಸುವ ಸಾಧ್ಯತೆ ಇದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಮತ್ತಷ್ಟು ಬಿಗಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.