ರುದ್ರಾಕ್ಷಿ ನೇಪಾಳದಲ್ಲಿ ಸಮೃದ್ಧವಾಗಿ ಬೆಳೆಯುವ ವೃಕ್ಷ. ಸಾಧು ಸಂತರು ಇದನ್ನು ಮಾಲೆಯಾಗಿ ಅಲಂಕರಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಇದು ಕೇವಲ ಅಲಂಕಾರಿಕ ವಸ್ತು ಅಲ್ಲ ಹಲವಾರು ರೋಗಗಳಿಗೆ ದಿವ್ಯೌಷಧ ಕೂಡ ಹೌದು.
ರುದ್ರಾಕ್ಷಿ ‘ಸಿ’ ಜೀವಸತ್ವದ ಆಗರ. ಇದಕ್ಕೆ ಹೃದಯದ ಕ್ರಿಯೆಯನ್ನು ಚುರುಕುಗೊಳಿಸುವ ಸಾಮರ್ಥ್ಯವಿದೆ.
ರುದ್ರಾಕ್ಷಿಯನ್ನು ತದೇಕ ದೃಷ್ಟಿಯಿಂದ ದೀರ್ಘಕಾಲದವರೆಗೆ ನೋಡುತ್ತಿದ್ದರೆ ಕಣ್ಣಿನ ದೋಷಗಳು ನಿವಾರಣೆಯಾಗುವವು.
ರುದ್ರಾಕ್ಷಿಯಲ್ಲಿರುವ ಕಫ ನಾಶಕ ಗುಣ ಅಸ್ತಮಾ, ನೆಗಡಿ ಮುಂತಾದವನ್ನು ಶಮನಗೊಳಿಸುತ್ತದೆ.
ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ರುದ್ರಾಕ್ಷಿ ಸಹಾಯಕಾರಿ.
ರುದ್ರಾಕ್ಷಿಯನ್ನು ಜಪಸರವಾಗಿ ಬಳಸುವುದರಿಂದ ಮಣಿಗಳ ಎಣಿಕೆಯ ಸಮಯದಲ್ಲಿ ಹೆಬ್ಬೆರಳು, ತೋರು ಬೆರಳಿನ ತುದಿಗಳಲ್ಲಾಗುವ ಒತ್ತಡದ ಕಾರಣ ಕಣ್ಣು, ಮಿದುಳು, ಪಿಟ್ಯುಟರಿ ಗ್ರಂಥಿಗಳಿಗೆ ರಕ್ತದ ಸರಬರಾಜು ಸರಾಗವಾಗುತ್ತದೆ.