ಖಾದ್ಯ ತೈಲ ತಯಾರಿಕಾ ಕಂಪನಿ ರುಚಿ ಸೋಯದ ಷೇರು ಬೆಲೆಯಲ್ಲಿ ಶೇ.5 ರಷ್ಟು ಏರಿಕೆ ಕಂಡಿದ್ದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 973 ರೂ.ಗೆ ಜಿಗಿದಿದೆ.
ಭಾನುವಾರ ರುಚಿ ಸೋಯಾದ ಬೋರ್ಡ್ ಮೀಟಿಂಗ್ ನಡೆದಿದ್ದು, ಪತಂಜಲಿ ಮಾಲೀಕತ್ವದ ರುಚಿ ಸೋಯಾ ಇಂಡಸ್ಟ್ರೀಸ್ ಮಂಡಳಿಯು ತನ್ನ ಹೆಸರನ್ನು ಪತಂಜಲಿ ಫುಡ್ಸ್ ಲಿಮಿಟೆಡ್ ಎಂದು ಅಥವಾ ರಿಜಿಸ್ಟ್ರಾರ್ ಕಂಪನಿಯಲ್ಲಿ ಲಭ್ಯವಾಗುವ ಬೇರೆ ಹೆಸರು ನಾಮಕರಣ ಮಾಡಲು ಅನುಮೋದಿಸಿದೆ. ಹಾಗೆಯೇ ಪತಂಜಲಿ ಆಹಾರೋತ್ಪನ್ನದ ಜತೆ ಎಲ್ಲ ರೀತಿಯ ಸಹಯೋಗ ವಿಸ್ತರಣೆಗೂ ಒಪ್ಪಲಾಗಿದೆ. ಇದು ಷೇರು ಮೌಲ್ಯ ಜಿಗಿತಕ್ಕೆ ಮುಖ್ಯ ಕಾರಣವಾಯಿತು.
ಈ ಸಾಕ್ಷ್ಯ ಚಿತ್ರ ವೀಕ್ಷಿಸಿದ್ರೆ ನಿಮಗೆ ಸಿಗುತ್ತೆ 1.8 ಲಕ್ಷ ರೂಪಾಯಿ…!
ರುಚಿ ಸೋಯಾ ಎಫ್‌ಪಿಒ (ಫಾಲೋ ಆನ್ ಸಾರ್ವಜನಿಕ ಕೊಡುಗೆ)ನಿಂದ ಬರುವ ಆದಾಯದ ಒಂದು ಭಾಗವನ್ನು ಸಾಲ ಮರುಪಾವತಿಸಲು ಸಹ ಬಳಸಿಕೊಳ್ಳಲಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ 2,925 ಕೋಟಿ ರೂ.ಸಾಲ ಮರುಪಾವತಿ ಮಾಡಿದೆ.
ರುಚಿ ಸೋಯಾ ಎಫ್‌ಪಿಒ ಮೂಲಕ 4,300 ಕೋಟಿ ರೂ. ಸಂಗ್ರಹಿಸಿದ್ದು, ಇದನ್ನು ಮಾರ್ಚ್ 24 ರಿಂದ ಮಾರ್ಚ್ 28 ರ ನಡುವೆ ಪ್ರತಿ ಷೇರಿಗೆ 615 ರೂ.ನಿಂದ 650 ರೂ.ನಡುವಿನ ಬೆಲೆ ಅಂತರದಲ್ಲಿ ಪ್ರಾರಂಭಿಸಲಾಗಿತ್ತು.