
ಬ್ರೆಡ್ ಜ್ಯಾಮ್, ಬ್ರೆಡ್ ಕಟ್ಲೆಟ್, ಬ್ರೆಡ್ ಉಪ್ಪಿಟ್ಟು ಹೀಗೆ ಬ್ರೆಡ್ ನಲ್ಲಿ ಬೇರೆ ಬೇರೆ ತಿಂಡಿಗಳನ್ನು ಮಾಡಬಹುದು. ಅದ್ರಲ್ಲಿ ಬ್ರೆಡ್ ಪೇಡಾ ಕೂಡ ಒಂದು. ಮನೆಯಲ್ಲಿ ಸುಲಭವಾಗಿ ಬ್ರೆಡ್ ಪೇಡಾ ಹೇಗೆ ಮಾಡೋದು ಅಂತಾ ನಾವು ಹೇಳ್ತೇವೆ.
ಬ್ರೆಡ್ ಪೇಡಾ ಮಾಡಲು ಬೇಕಾಗುವ ಪದಾರ್ಥ:
4 ಬ್ರೆಡ್, 2 ದೊಡ್ಡ ಚಮಚ ಏಲಕ್ಕಿ ಪುಡಿ, ಅರ್ಧ ಕಪ್ ಸಕ್ಕರೆ ಪುಡಿ, 2-3 ಚಮಚ ಹಾಲು, 2-3 ಚಮಚ ತುಪ್ಪ, 1 ಚಮಚ ಏಲಕ್ಕಿ ಕಾಳು, ಒಂದು ಚಮಚ ಪಿಸ್ತಾ.
ಬ್ರೆಡ್ ಪೇಡಾ ಮಾಡುವ ವಿಧಾನ:
ಬ್ರೆಡ್ ಪೇಡಾ ಮಾಡುವ ಮೊದಲು ಬ್ರೆಡ್ಡನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತ್ರ ಮಿಕ್ಸರ್ ಜಾರ್ ಗೆ ಬ್ರೆಡ್ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಇನ್ನೊಂದು ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ತುಪ್ಪ ಬಿಸಿಯಾಗ್ತಿದ್ದಂತೆ ಅದಕ್ಕೆ ಬ್ರೆಡ್ ಹುಡಿ ಹಾಕಿ ಮಿಕ್ಸ್ ಮಾಡಿ. ನಂತ್ರ ಸಕ್ಕರೆ ಹುಡಿ ಹಾಗೂ ಏಲಕ್ಕಿ ಪುಡಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಒಂದು ನಿಮಿಷ ಬಿಟ್ಟು ಹಾಲನ್ನು ಹಾಕಿ. ಮತ್ತೊಂದು ನಿಮಿಷ ಬಿಟ್ಟು ಗ್ಯಾಸ್ ಬಂದ್ ಮಾಡಿ.
ಮಿಶ್ರಣ ತಣ್ಣಗಾದ ಮೇಲೆ ಸರಿಯಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಿ. ಪೇಡೆ ಆಕಾರ ನೀಡಿ ಅದ್ರ ಮೇಲೆ ಏಲಕ್ಕಿ ಕಾಳು ಹಾಗೂ ಪಿಸ್ತಾ ಇಟ್ಟು ಅಲಂಕರಿಸಿ.