ನವದೆಹಲಿ: ಐಸಿಎಂಆರ್ ನಿಂದ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲಾಗಿದ್ದು, ಪಾಸಿಟಿವ್ ಬಂದವರಿಗೆ ಟೆಸ್ಟ್ ಮಾಡಬೇಕಿಲ್ಲ. ಪ್ರಯಾಣಿಕರಿಗೆ RTPCR ಕಡ್ಡಾಯವಲ್ಲ ಎಂದು ಕೊರೋನಾ ಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಒಮ್ಮೆ ಪಾಸಿಟಿವ್ ಆದವರಿಗೆ ಮತ್ತೆ ಟೆಸ್ಟ್ ಮಾಡಬೇಕಿಲ್ಲ ಎಂದು ಹೇಳಲಾಗಿದೆ.
ಆರೋಗ್ಯವಂತರು ಅಗತ್ಯ ಕಾರ್ಯಗಳಿಗಾಗಿ ಅಂತರಾಜ್ಯ ಪ್ರಯಾಣಮಾಡುವಾಗ ಅವರಿಗೆ RTPCR ಪರೀಕ್ಷೆ ಕಡ್ಡಾಯ ಬೇಡವೆಂದು ಕೇಂದ್ರ ಸರ್ಕಾರ ಹೊಸ ಕೋವಿಡ್ ಪರೀಕ್ಷೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪ್ರಯೋಗಾಲಯಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರಂತೆ ಸೋಂಕಿನ ಲಕ್ಷಣ ಹೊಂದಿಲ್ಲದೆ ಇರುವವರು ಅಗತ್ಯ ಸೇವೆಗಾಗಿ ಪ್ರಯಾಣ ಕೈಗೊಂಡಾಗ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೋಂಕಿನ ಲಕ್ಷಣ ಹೊಂದಿದವರು ಅಗತ್ಯವಿಲ್ಲದ ಹೊರತು ಅಂತರರಾಜ್ಯ ಪ್ರಯಾಣ ಮಾಡಬಾರದು. ಆರೋಗ್ಯವಂತರು ಅಂತರಾಜ್ಯ ಪ್ರಯಾಣ ಕೈಗೊಂಡಾಗ ಅವರಿಗೆ RTPCR ಕಡ್ಡಾಯ ಬೇಡ. ಈ ಹಿಂದೆ ಕೋವಿಡ್ ಸೋಂಕಿತರಾಗಿದ್ದವರಿಗೆ RTPCR ಪರೀಕ್ಷೆ ಬೇಡವೆಂದು ಹೇಳಲಾಗಿದೆ.