ಬೆಂಗಳೂರು: ಇಂದಿನಿಂದ ಆರ್.ಟಿ.ಒ. ಕಚೇರಿಗಳಲ್ಲಿ ಸೇವೆ ಪುನರಾರಂಭವಾಗಲಿದೆ ಎಂದು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.
ಸಾರಥಿ ಪೋರ್ಟಲ್ ಸರ್ವರ್ ಡೌನ್ ಆಗಿದ್ದರಿಂದ ರಾಜ್ಯದ ಆರ್.ಟಿ.ಒ. ಕಚೇರಿಗಳಲ್ಲಿ ಡಿಎಲ್, ಆರ್.ಸಿ., ಎಫ್.ಸಿ., ವಾಹನಗಳ ನೋಂದಣಿ ಸೇರಿದಂತೆ ಯಾವ ಸೇವೆಯೂ ಸಿಗದೆ ಸಾರ್ವಜನಿಕರು ಪರದಾಡುವಂತಾಗಿತ್ತು. ಮೇ 15 ರಿಂದಲೂ ಆರ್‌ಟಿಒ ಕಚೇರಿಗಳಲ್ಲಿ ಸೇವೆಗಳು ಬಂದ್ ಆಗಿದ್ದು, ರಾಜ್ಯದ ಆರ್‌ಟಿಒ ಕಚೇರಿಗಳಿಗೆ ಜನ ಅಲೆದಾಡುವಂತಾಗಿತ್ತು.
ಪರಿವಾಹನ ಮತ್ತು ಸಾರಥಿ ಪೋರ್ಟಲ್ ನಲ್ಲಿ ಸಾರಿಗೆ ಸಂಬಂಧಿತ ಸೇವೆಗಳನ್ನು ಒದಗಿಸಲಾಗುತ್ತಿದೆ. ಪೋರ್ಟಲ್ ಗಳನ್ನು ನ್ಯಾಷಲ್ ಇನ್ ಫಾರ್ಮಾಟಿಕ್ಸ್ ಸೆಂಟರ್ ನಿರ್ವಹಿಸುತ್ತಿದೆ. ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಅರ್ಜಿಗಳ ಸಲ್ಲಿಕೆ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸರಿಪಡಿಸಲಾಗಿದೆ. ಶನಿವಾರದಿಂದ ಆರ್.ಟಿ.ಒ. ಕಚೇರಿ ಸೇವೆಗಳು ಪುನಾರಾರಂಭವಾಗಲಿವೆ ಎಂದು ಹೇಳಲಾಗಿದೆ.